GOOD NEWS- ಕೊನೆಗೂ ಬಂದ ಕೊರೊನಾ ಮದ್ದು- ಸೋಮವಾರ ಬಿಡುಗಡೆ
Sunday, May 16, 2021
ನವದೆಹಲಿ; ಮದ್ದೆ ಇಲ್ಲದ ಕೊರೊನಾ ಮದ್ದು ಅರೆದ ಡಿ ಆರ್ ಡಿ ಓ ಸಂಸ್ಥೆ ಸೋಮವಾರ (17 May)ದಂದು ಔಷಧವನ್ನು ಬಿಡುಗಡೆ ಮಾಡಲಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ನವದೆಹಲಿಯಲ್ಲಿ ಇದನ್ನು ಬಿಡುಗಡೆ ಗೊಳಿಸಲಿದ್ದಾರೆ. ಈ ಔಷಧದ ಹತ್ತು ಸಾವಿರ ಪ್ಯಾಕೆಟ್ಗಳನ್ನು ಅವರು ಕೆಲವು ಆಸ್ಪತ್ರೆಗಳಿಗೆ ಸೋಮವಾರವೆ ನೀಡಲಿದ್ದಾರೆ.
ಒ2 ಡಿಜೆ ಎಂಬ ಹೆಸರಿನ ಈ ಔಷಧವು ಕೊರೊನಾ ಸೋಂಕಿತ ವ್ಯಕ್ತಿಯ ದೇಹವನ್ನು ಸೇರಿಕೊಂಡ ಕೂಡಲೇ ಕಾರ್ಯರಂಭಿಸಿ ವೈರಾಣುಗಳ ಬಲವನ್ನು ಕುಂದಿಸುತ್ತದೆ. ಕೊರೊನಾ ಸೋಂಕು ಇತರ ಭಾಗಗಳಿಗೆ ಹರಡದಂತೆ ಈ ಔಷಧಿ ರಕ್ಷಾಕವಚ ನಿರ್ವಿುಸುತ್ತದೆ. ಈ ಔಷಧ ಬಳಸಿದ 3 ದಿನಗಳಲ್ಲಿ ಕೊರೊನಾ ಸೋಂಕಿತರು ಚೇತರಿಸಿಕೊಳ್ಳಲಿದ್ದಾರೆ ಎಂದು ಕ್ಲಿನಿಕಲ್ ಟ್ರಯಲ್ನಲ್ಲಿ ಇದು ಸಾಬೀತಾಗಿದೆ.
ಪುಡಿಯ ರೂಪದಲ್ಲಿರುವ ಈ ಔಷಧವನ್ನು ಸೋಂಕಿತರು ನೀರಿನಲ್ಲಿ ಬೆರೆಸಿ ಕುಡಿಯಬಹುದು. ಈ ಔಷಧದಿಂದ ಸೋಂಕಿತರು 3 ದಿನದಲ್ಲಿ ಚೇತರಿಸಿಕೊಂಡರೆ ಆಸ್ಪತ್ರೆಗಳಲ್ಲಿ ಕಾಡುತ್ತಿರುವ ಬೆಡ್ , ಆಮ್ಲಜನಕ ಕೊರತೆ ಸಮಸ್ಯೆ ಬಗೆಹರಿಯಲಿದೆ.