
ಸಮುದ್ರದಲ್ಲಿ ಸಿಲುಕಿರುವ 9 ಮಂದಿಯ ರಕ್ಷಣೆಗೆ ಬರಲಿದೆ ಹೆಲಿಕಾಪ್ಟರ್- ನಮ್ಮನ್ನು ರಕ್ಷಿಸಿ ಎಂದು ಮೊರೆ ಇಡುವ ವಿಡಿಯೋ ವೈರಲ್
ಮಂಗಳೂರು: ತೌಕ್ತೆ ಚಂಡಮಾರುತ ಪ್ರಭಾವದಿಂದ ಸಮುದ್ರಮಧ್ಯೆ ಅಪಾಯಕ್ಕೆ ಸಿಲುಕಿರುವ ಕೋರಮಂಡಲ ಟಗ್ ಬೋಟ್ನಲ್ಲಿನ 9 ಮಂದಿ ಯನ್ನು ರಕ್ಷಣೆ ಮಾಡಲು ಹೆಲಿಕಾಪ್ಟರ್ ಬಳಸಲು ರಾಜ್ಯ ಸರಕಾರ ಅನುಮತಿ ನೀಡಿದೆ.
ಎಂಆರ್ಪಿಎಲ್ ಗುತ್ತಿಗೆ ನೌಕರರನ್ನು ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲು ನಿರ್ಧರಿಸಲಾಗಿದ್ದು ಹೆಲಿಕಾಪ್ಟರ್ ಹಾರಲು ಅನುಕೂಲಕರ ಹವಾಮಾನ ನಿರ್ಮಾಣ ಅದ ಕೂಡಲೇ ಗೋವಾದಿಂದ ನೌಕಾಪಡೆಯ ಹೆಲಿಕಾಪ್ಟರ್ ಆಗಮಿಸಿ ಕಾರ್ಯಾಚರಣೆ ನಡೆಸಲಿದೆ.
ಕೋರಮಂಡಲ ಟಗ್ ಬೋಟ್ ಮುಲ್ಕಿ ಕಡಲತೀರದಿಂದ ನಾಲ್ಕು ನಾಟಿಕಲ್ ಮೈಲು ದೂರದಲ್ಲಿದ್ದು ಅದರಲ್ಲಿರುವ 9 ನೌಕರರು ಲೈಫ್ ಜಾಕೆಟ್ ಧರಿಸಿದ್ದಾರೆ. ಅವರಿಗೆ ಸದ್ಯದ ಮಟ್ಟಿಗೆ ಬೇಕಾದ ನೀರು, ಊಟದ ವ್ಯವಸ್ಥೆ ಎಲ್ಲವೂ ಇದೆ ಎಂಬ ಮಾಹಿತಿ ಜಿಲ್ಲಾಡಳಿತ ಕ್ಕೆ ಲಭ್ಯವಾಗಿದೆ.
ಇದರ ಜೊತೆಯಲ್ಲಿದ್ದ ಮತ್ತೊಂದು ಬೋಟ್ ಅರಬ್ಬೀ ಸಮುದ್ರದ 17 ನಾಟಿಕಲ್ ಮೈಲು ದೂರದಲ್ಲಿ ದುರಂತಕ್ಕೀಡಾಗಿತ್ತು. ಇದರಲ್ಲಿದ್ದ ವರಲ್ಲಿ ಮೂವರು ರೆಸ್ಕ್ಯೂ ಟ್ಯೂಬ್ ಬಳಸಿ ಈಜಿ ದಡ ಸೇರಿದ್ದರು. ಓರ್ವ ನಿನ್ನೆ ಮೃತಪಟ್ಟಿದ್ದು, ಮತ್ತೋರ್ವನ ಮೃತದೇಹ ಇಂದು ಪತ್ತೆಯಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಮೂವರ ಶೋಧ ಕಾರ್ಯಾಚರಣೆಯೂ ನಡೆಯುತ್ತಿದೆ.
ಇನ್ನೂ 9 ಜನರರಿರುವ ಬೋಟ್ ನಲ್ಲಿ ಇರುವ ಕಾರ್ಮಿಕ ವಿಡಿಯೋ ಕಳುಹಿಸಿದ್ದು ಅಪಾಯದಲ್ಲಿರುವ ನಮ್ಮನ್ನು ರಕ್ಷಿಸಿ ಎಂದು ವಿನಂತಿ ಮಾಡಿದ ವಿಡಿಯೋ ವೈರಲ್ ಆಗಿದೆ.