ಅಚ್ಚರಿ- ಬೆಳ್ತಂಗಡಿಯ ಗರ್ಡಾಡಿ ಯಲ್ಲಿ ನೀರು ನಾಯಿಗಳ ಗುಂಪು ಪತ್ತೆ ;ವಿಡಿಯೋ
Sunday, May 16, 2021
ಮಂಗಳೂರು;ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಯಲ್ಲಿ ನೀರು ನಾಯಿಗಳ ಗುಂಪು ಕಂಡು ಬಂದಿದೆ.
ಗರ್ಡಾಡಿ ಸಮೀಪದ ಹಳ್ಳದಲ್ಲಿ ಈ ಅಪರೂಪದ ನೀರುನಾಯಿಗಳು ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಗರ್ಡಾಡಿ ಸಮೀಪದ ಕುಂಡದಬೆಟ್ಟು ಕುಬಳಬೆಟ್ಟು ಸಮೀಪ ಶನಿವಾರದಂದು ಸಂಜೆ 4 ಗಂಟೆಯ ಸುಮಾರಿಗೆ ನಾಯಿ ಕೂಗುವ ಶಬ್ದ ಕೇಳಿ ಸ್ಥಳೀಯರು ಹೋಗಿ ನೋಡುವಾಗ ಹಳ್ಳದಲ್ಲಿ ಸುಮಾರು25 ಕ್ಕಿಂತಲೂ ಅಧಿಕ ನೀರು ನಾಯಿಗಳು ಕಂಡು ಬಂದಿವೆ . ಈ ಅಪರೂಪದ ನೀರು ನಾಯಿಗಳು ಕಳೆದ ಆಕ್ಟೋಬರ್ ನಲ್ಲಿಯೂ ರಾತ್ರಿ ಹೊತ್ತಿನಲ್ಲಿ ಕಂಡು ಬಂದಿದ್ದವು. ಅದರೆ ಈ ಬಾರಿ ಹಗಲು ಹೊತ್ತಿನಲ್ಲೂ ಇಪ್ಪತ್ತೈದಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಇದು ಕಂಡು ಬಂದಿದೆ. ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಗರ್ಡಾಡಿಗೆ ಇದು ಎಲ್ಲಿಂದ ಬಂದಿತೆಂಬುದು ಅಚ್ಚರಿಗೆ ಕಾರಣವಾಗಿದೆ
Beaver