
ಏಕ ಕಾಲಕ್ಕೆ ಅಕ್ಕ ತಂಗಿಯನ್ನು ಮದುವೆಯಾದವನ ವಿರುದ್ಧ ಪ್ರಕರಣ: ತಂಗಿಯ ಕಾರಣದಿಂದ ಅರೆಸ್ಟ್ ಆದ ವರ
Monday, May 17, 2021
ಮುಳಬಾಗಿಲು/ ಕೋಲಾರ: ಏಕಕಾಲದಲ್ಲಿ ಅಕ್ಕ ಮತ್ತು ತಂಗಿಯನ್ನು ಮದುವೆಯಾದಾತ ಈಗ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ. ಈತ ಮದುವೆಯಾದವರ ಪೈಕಿ ತಂಗಿಗೆ 18 ವರ್ಷ ತುಂಬಿರದ ಕಾರಣ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಕ್ಕತಂಗಿಯರ ಪೈಕಿ ಅಕ್ಕನಿಗೆ ಮಾತು ಬಾರದ ಹಿನ್ನೆಲೆಯಲ್ಲಿ ಕೋರಿಕೆಯ ಮೇರೆಗೆ
ಮುಳಬಾಗಿಲಿನ ವೇಮುಗಡುವಿನ ಉಮಾಪತಿ ಎಂಬಾತ ತಂಗಿಯ ಜೊತೆ ಅಕ್ಕನನ್ನೂ ವರಿಸಿಕೊಂಡಿದ್ದ.
ಮದುವೆ ಮತ್ತು ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸುದ್ದಿಯಾಗಿತ್ತು. ಈ ನಿಟ್ಟಿನಲ್ಲಿ ಕೋಲಾರ ಜಿಲ್ಲಾಧಿಕಾರಿ ಸೆಲ್ವಮಣಿ ಘಟನೆ ಬಗ್ಗೆ ಪರಿಶೀಲನೆ ಗೆ ಆದೇಶಿಸಿದ್ದರು. ಈ ವೇಳೆ ತಂಗಿ ಅಪ್ರಾಪ್ತೆ ಎಂದು ತಿಳಿದು ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಓದಿ;