ಅಕ್ಕ- ತಂಗಿಯನ್ನು ಏಕಕಾಲದಲ್ಲೇ ವರಿಸಿದ ಯುವಕ- ತಂಗಿಯ ತ್ಯಾಗದ ಹಿಂದಿದೆ ನೋವಿನ ಕಥೆ
Sunday, May 16, 2021
ಮುಳಬಾಗಿಲು/ ಕೋಲಾರ: ಯುವಕನೋರ್ವ ಅಕ್ಕ ಮತ್ತು ತಂಗಿಯನ್ನು ಒಂದೇ ಮುಹೂರ್ತದಲ್ಲಿ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾನೆ. ಆದರೆ ಈ ಮದುವೆಯ ಹಿಂದೆ ನೋವಿನ ಕಥೆಯೊಂದಿದೆ.
ಮುಳಬಾಗಿಲಿನ ಉಮಾಪತಿ ಎಂಬಾತನೇ ಇಬ್ಬರನ್ನು ಮದುವೆಯಾದ ಪತಿ. ಮುಳಬಾಗಿಲಿನ ವೇಗಮಡಗು ಎಂಬಲ್ಲಿನ ಸಹೋದರಿಯರಾದ ಸುಪ್ರಿಯಾ ಮತ್ತು ಲಲಿತಾ ಎಂಬ ಸಹೋದರಿಯನ್ನ ಉಮಾಪತಿ ಏಕಕಾಲದಲ್ಲೇ ವರಿಸಿದ್ದಾನೆ.
ಇದಕ್ಕೆ ಕಾರಣವೂ ಇದೆ. ಅಕ್ಕ ಸುಪ್ರಿಯಾಗೆ ಮಾತು ಬರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆಗೆ ಕಂಕಣ ಕೂಡಿ ಬರುತ್ತಿರಲಿಲ್ಲ. ಅಕ್ಕನ ಭವಿಷ್ಯದ ಬಗ್ಗೆ ಚಿಂತಿತಳಾಗಿದ್ದ ತಂಗಿ ಲಲಿತಾ ತನಗೆ ಬಂದ ವಿವಾಹ ಪ್ರಸ್ತಾಪದ ಮುಂದೆ ತನ್ನ ಅಕ್ಕನನ್ನೂ ಮದುವೆಯಾದರೆ ಮಾತ್ರ ಈ ವಿವಾಹಕ್ಕೆ ಒಪ್ಪುವುದಾಗಿ ಹೇಳಿಕೊಂಡಿದ್ದಳು. ಈ ನಿಟ್ಟಿನಲ್ಲಿ ಇದೀಗ ಹಿರಿಯರ ಸಮ್ಮುಖದಲ್ಲಿ ಇಬ್ಬರೂ ಸಹೋದರಿಯರ ಮದುವೆ ಒಬ್ಬ ವರನೊಂದಿಗೆ ಶಾಸ್ತ್ರೋಕ್ತವಾಗಿ ನಡೆದಿದೆ.