-->

Mangalore: ತೌಕ್ತೆ ಚಂಡಮಾರುತ ನೀಡಿತು ದೊಡ್ಡ ಹೊಡೆತ; 8 ಜನರಿದ್ದ ಬೋಟ್ ಪಲ್ಟಿ, 9 ಜನರಿದ್ದ ಬೋಟ್ ಅಪಾಯದಲ್ಲಿ....( COMPLETE STORY)

Mangalore: ತೌಕ್ತೆ ಚಂಡಮಾರುತ ನೀಡಿತು ದೊಡ್ಡ ಹೊಡೆತ; 8 ಜನರಿದ್ದ ಬೋಟ್ ಪಲ್ಟಿ, 9 ಜನರಿದ್ದ ಬೋಟ್ ಅಪಾಯದಲ್ಲಿ....( COMPLETE STORY)


ಮಂಗಳೂರು; ತೌಕ್ತೆ ಚಂಡಮಾರುತ ದಕ್ಷಿಣ ಕನ್ನಡ ಜಿಲ್ಲೆಗೆ ಭಾರಿ ಅಘಾತವನ್ನು ನೀಡಿದೆ.
 ತೌಕ್ತೆ ಚಂಡಮಾರುತ ಪ್ರಭಾವದಿಂದ ಕಡಲ್ಕೊರೆತ, ಮನೆಹಾನಿ, ಸ್ಮಶಾನ, ಅಂಗಡಿ ಸಮುದ್ರಪಾಲಾದ ಘಟನೆ ನಡೆದ ಬೆನ್ನಿಗೆ ಎರಡು ಬೋಟ್ ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ.

ಮಂಗಳೂರು ಸುರತ್ಕಲ್ ಬಳಿಯಿಂದ ಆಳಸಮುದ್ರದಲ್ಲಿ ಈ ಘಟನೆ ನಡೆದಿದೆ. ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ತೇಲು ಜೆಟ್ಟಿಯನ್ನು ನಿರ್ವಹಣೆ ಮಾಡುತ್ತಿದ್ದ 2  ಬೋಟ್ ಗಳು ತೌಕ್ತೆ ಚಂಡಮಾರುತ ಕ್ಕೆ ಸಿಲುಕಿಕೊಂಡಿದ್ದವು. ಇದರಲ್ಲಿ ಒಂದು ಬೋಟ್ ಪಲ್ಟಿಯಾಗಿದ್ದು ಅದರಲ್ಲಿದ್ದ 8 ಮಂದಿ ಸಮುದ್ರಕ್ಕೆ ಬಿದ್ದಿದ್ದಾರೆ. ಇದರಲ್ಲಿ ಇಬ್ಬರು  ರೆಸ್ಕ್ಯೂ ಟ್ಯೂಬ್ ಮೂಲಕ ಉಡುಪಿ ಜಿಲ್ಲೆಯ ಮಟ್ಟು ಬಳಿ ಈಜಿ ದಡ ಸೇರಿದ್ದಾರೆ. ಓರ್ವ ವ್ಯಕ್ತಿಯ ಮೃತದೇಹ ಕಾಪು ಕಡಲಕಿನಾರೆಯಲ್ಲಿ ಪತ್ತೆಯಾಗಿದೆ. ಇನ್ನು 5 ಮಂದಿ ನಾಪತ್ತೆಯಾಗಿದ್ದಾರೆ.

ಇನ್ನೊಂದು ಬೋಟ್ ನಲ್ಲಿ  9 ಮಂದಿ ಇದ್ದು ಚಂಡಮಾರುತ ಹೊಡೆತಕ್ಕೆ ಈ ಬೋಟ್ ಅಪಾಯಕ್ಕೆ ಸಿಲುಕಿದೆ. ಸದ್ಯ 9 ಮಂದಿ ಸುರಕ್ಷಿತರಾಗಿದ್ದು ಇಂಡಿಯನ್ ಕೋಸ್ಟ್ ಗಾರ್ಡ್ ಸಂಪರ್ಕ ದಲ್ಲಿದ್ದಾರೆ. ನಾಳೆ ಬೆಳಿಗ್ಗೆ ಅವರ ರಕ್ಷಣೆ ಮಾಡಲಾಗುವುದು ಎಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99