
TAUKTAE : ಸಸಿಹಿತ್ಲುವಿನಲ್ಲಿ ಸಮುದ್ರಪಾಲಾದ ಅಂಗಡಿ- ವೈರಲ್ VIDEO
ಮಂಗಳೂರು: ತೌಕ್ತೆ ಚಂಡಮಾರುತಕ್ಕೆ ಮಂಗಳೂರಿನ ಕಡಲ ತೀರಗಳು ಪ್ರಕ್ಷುಬ್ಧಗೊಂಡಿದೆ.
ಅರಬ್ಬಿ ಸಮುದ್ರದ ಭೀಕರ ಅಲೆಗೆ ಬೆಳಿಗ್ಗೆ ಮಂಗಳೂರಿನ ಸೋಮೇಶ್ವರ ದಲ್ಲಿ ಸ್ಮಶಾನವೊಂದು ಸಮುದ್ರಪಾಲಾದ ಘಟನೆ ನಡೆದಿತ್ತು. ಮಧ್ಯಾಹ್ನ ಬಳಿಕ ಮಂಗಳೂರಿನ ಸಸಿಹಿತ್ಲುವಿನಲ್ಲಿರುವ ಅಂಗಡಿಯೊಂದು ಸಮುದ್ರ ಪಾಲಾಗಿದೆ.ಭೀಕರ ಅಲೆಗೆ ಅಂಗಡಿ ಸಮುದ್ರಕ್ಕೆ ಕುಸಿದು ಬಿದ್ದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ