ಕಡಲೆ ಬೀಜ ಗಂಟಲಲ್ಲಿ ಸಿಲುಕಿ ಮಗು ಮೃತ್ಯು: ದೇವಸ್ಥಾನಕ್ಕೆ ಬಂದು ಮಗುವನ್ನು ಬದುಕಿಸುವಂತೆ ಗೋಗೆರೆದ ಅಜ್ಜಿ
Wednesday, May 19, 2021
ಉತ್ತರ ಕನ್ನಡ: ಶೇಂಗಾ ಬೀಜ ತಿನ್ನುತ್ತಿದ್ದ ವೇಳೆ ಗಂಟಲಲ್ಲಿ ಸಿಲುಕಿ ಎರಡೂವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ ಇಲ್ಲಿನ ಯಲ್ಲಾಪುರ ಬಳಿ ನಡೆದಿದೆ.
ಮನೆಯಲ್ಲಿ ಅಜ್ಜಿ ಮತ್ತು ತಾಯಿಯ ಮುಂದೆ ಆಟವಾಡುತ್ತಾ ಮಗು ಸಾತ್ವಿಕ್ ಆಟವಾಡುತ್ತಾ ಶೇಂಗಾ ಬೀಜ ತಿನ್ನುತ್ತಿತ್ತು. ಈ ವೇಳೆ ಬೀಜ ಗಂಟಲಲ್ಲಿ ಸಿಲುಕಿದ್ದು, ಮಗು ಉಸಿರಾಡಲು ಕಷ್ಟ ಪಡುತ್ತಿತ್ತು. ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಗಂಟಲಲ್ಲಿ ಸಿಲುಕಿದ್ದ ಶೇಂಗಾ ಬೀಜಗಳನ್ನು ಹೊರತೆಗೆಯಲಾದರೂ ಅದಾಗಲೇ ಮಗು ಮೃತಪಟ್ಟಿತ್ತು. ಈ ವೇಳೆ ತಾಯಿ ಮತ್ತು ಅಜ್ಜಿ ಆಕ್ರಂದನ ಮುಗಿಲು ಮುಟ್ಟಿದ್ದು, ಸಮೀಪದಲ್ಲೇ ಇದ್ದ ದೇವಸ್ಥಾನಕ್ಕೆ ಮಗುವನ್ನು ಹೊತ್ತೊಯ್ದ ಅಜ್ಜಿ ಅಲ್ಲಿ ಮಗುವನ್ನು ಬದುಕಿಸಿಕೊಡುವಂತೆ ಪ್ರಾರ್ಥಿಸಿದ್ದು ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.