ಸುದ್ದಿಗಳು
ಲೋಡ್ ಆಗುತ್ತಿದೆ...

ಪುತ್ತೂರು: ವಿಡಿಯೋ ಕಾಲ್ ನಲ್ಲಿ ನಿನ್ನ 'ಅದು' ತೋರಿಸು; ಹಿಂದು ಸಂಘಟನೆಯ ಮುಖಂಡನ HONEYTRAP ಗೆ ಪ್ರೀತಿ ಶರ್ಮಾ ಅಟೆಂಪ್ಟ್!

ಪುತ್ತೂರು: ಮಹಿಳೆಯ ಹೆಸರಿನಲ್ಲಿರುವ ಫೇಸ್ ಬುಕ್ ಖಾತೆಯಿಂದ ನನಗೆ ಅಶ್ಲೀಲ ಮೆಸೇಜ್ ಗಳು ಬಂದಿದ್ದು, ಇದೊಂದು ಹನಿಟ್ರಾಪ್ ತಂಡದ ಕೃತ್ಯವಾಗಿರಬಹುದೆಂದು ಶಂಕಿಸಿ ಹಿಂದೂ ಜಾಗರಣ ವೇದಿಕೆಯ ಗಣರಾಜ ಭಟ್ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಗಣರಾಜ್ ಭಟ್ಟರ ಫೇಸ್ ಬುಕ್ ಖಾತೆಗೆ ಪ್ರೀತಾ ಶರ್ಮಾ ಎಂಬ ಹೆಸರಿನಲ್ಲಿ ರಿಕ್ವೆಸ್ಟ್ ಬಂದಿದ್ದು, ಅವರು ಮೆಸೆಂಜರ್ ಮೂಲಕ ಯಾರೆಂದು ಪ್ರಶ್ನಿಸಿದ್ದಾರೆ.

ಈ ವೇಳೆ ಪ್ರತಿಕ್ರಯಿಸಿದ 'ಪ್ರೀತಾ ಶರ್ಮಾ' ತಾನು ಮುಂಬೈಯವಳೆಂದು ಪರಿಚಿಯಿಸಿದ್ದು,  ವೀಡಿಯೋ ಕಾಲ್ ಮಾಡಿ ಎಂಜಾಯ್ ಮಾಡುವ ಎಂದು ಕೇಳಿಕೊಂಡಿದ್ದಳು.
ಅಲ್ಲದೇ ವಾಟ್ಸಪ್ ನಂಬರ್ ಕೂಡಾ ಕೇಳಿದ್ದು, ವೀಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದ್ದಾಳೆ. ನೀವು ಬೆಡ್‌ರೂಂ ಅಥವಾ ಬಾತ್‌ರೂಂ ಗೆ ಹೋಗಿ‌ ನಿಮ್ಮ 'ಅದನ್ನು' ತೋರಿಸಿ, ನಾನು ಈಗ ಲೈಂಗಿಕ ಮೂಡ್‌ನಲ್ಲಿ ಇದ್ದೇನೆ ಎಂದು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಳು. 

ಇದರಿಂದ ಸಂಶಯಗೊಂಡ ಗಣರಾಜ ಭಟ್ಟರು ಈ ಸಂಭಾಷಣೆಯ ಸ್ಕ್ರೀನ್ ಶಾಟ್ ತೆಗೆದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿ ಹಂಚಿಕೊಳ್ಳಿ:
ಇತ್ತೀಚಿನ ಸುದ್ದಿಗಳು
×

WhatsApp Channel

ಬ್ರೇಕಿಂಗ್ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

JOIN NOW