
ನಿಮ್ಮ ಕುಟುಂಬಕ್ಕೆ ಮದುವೆ ಎನ್ನುವುದು ಏನು ಮಕ್ಕಳಾಟವೇ? .. ಅಮೀರ್ ಖಾನ್ ಮಗಳಿಗೆ ನೆಟ್ಟಿಗರ ಪ್ರಶ್ನೆ..
Monday, July 5, 2021
ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಎರಡನೇ ಹೆಂಡತಿಗೆ ಕಿರಣ್ ರಾವ್ಗೆ ಡಿವೋರ್ಸ್ ನೀಡಿದ್ದಾರೆ. ಹೀಗಿರುವಾಗಲೇ ಅವರ ಮಗಳು ಐರಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ನೆಟ್ಟಿಗರು ಸಾವಿರಾರು ಪ್ರಶ್ನೆ ಕೇಳಲಾರಂಭಿಸಿದ್ದಾರೆ.
ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಿಕೊಂಡು ಅದನ್ನು ಸಂತೋಷದಿಂದ ತಿನ್ನುವ ವಿಡಿಯೋವನ್ನು ಐರಾ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಆಕೆ ಹಾಕುತ್ತಿದ್ದಂತೆಯೇ ನೆಟ್ಟಿಗರು ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದಾರೆ. ಐರಾ ನಿಮ್ಮ ಅಪ್ಪ ಮತ್ತು ಚಿಕ್ಕಮ್ಮನಿಗೆ ಡಿವೋರ್ಸ್ ಆಗಿದೆ. ನಿಮ್ಮ ಕುಟುಂಬಕ್ಕೆ ಮದುವೆ ಎನ್ನುವುದು ಏನು ಮಕ್ಕಳಾಟವೇ? ಈಗಾಗಲೇ ಎರಡು ಅಮ್ಮಂದಿರಿರುವ ನಿಮಗೆ ಮೂರನೇ ಅಮ್ಮನಾಗಿ ಬದುವವರು ಯಾರು? ಹೀಗೆ ನಾನಾ ರೀತಿಯ ಪ್ರಶ್ನೆಗಳು ಕಾಮೆಂಟ್ ಬಾಕ್ಸ್ನಲ್ಲಿ ನೆಟ್ಟಿಗರು ಹೇಳಲಾರಂಭಿಸಿದ್ದಾರೆ. ಆದರೆ ಐರಾ ಅಪ್ಪನ ಡಿವೋರ್ಸ್ ಕುರಿತಾಗಿ ಆಕೆ ಒಂದೇ ಒಂದು ಮಾತನ್ನೂ ಆಡಿಲ್ಲ