ನನಗೊಂದು ಅವಕಾಶ ಕೊಡು ಪ್ಲೀಸ್.. ಎಂದು ನಟ ಶಾರುಖ್ ಖಾನ್ ಮನವಿ ಯಾರತ್ರ ಗೊತ್ತ..??
Monday, July 5, 2021
ಮುಂಬೈ: ಇತ್ತೀಚೆಗಷ್ಟೇ ಚಿತ್ರೀಕರಣ ಪ್ರಾರಂಭವಾಗಿದ್ದು, ಆಲಿಯಾ ತಮ್ಮ ಎಟರ್ನಲ್ ಸನ್ಶೈನ್ ಸಂಸ್ಥೆಯಡಿ ‘ಡಾರ್ಲಿಂಗ್ಸ್’ ಎಂಬ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅದರಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಾರೆ.
ಆಲಿಯಾ ತಮ್ಮ ಕ್ಯಾರಾವಾನ್ನಲ್ಲಿ ತಯಾರಾಗುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ‘ನಿರ್ಮಾಪಕಿಯಾಗಿ ಇದು ನನ್ನ ಮೊದಲ ಚಿತ್ರ. ನಿರ್ಮಾಪಕಿಯಾದರೂ, ನಟಿಯಾಗಿಯೇ ಗುರುತಿಸಿಕೊಳ್ಳುವುದಕ್ಕೆ ನಾನು ಹೆಚ್ಚು ಇಷ್ಟಪಡುತ್ತೀನಿ’ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿರುವ ಶಾರೂಖ್ ಖಾನ್, ‘ನಿನ್ನ ಮುಂದಿನ ಚಿತ್ರದಲ್ಲಿ ನನಗೊಂದು ಅವಕಾಶ ಕೊಡು ಪ್ಲೀಸ್. ಶೂಟಿಂಗ್ಗೆ ಸರಿಯಾದ ಸಮಯಕ್ಕೆ ಬರುತ್ತೀನಿ ಮತ್ತು ನೀನು ಹೇಳಿದ ಹಾಗೆ ಕೇಳಿಕೊಂಡಿರುತ್ತೀನಿ, ಪ್ರಾಮಿಸ್’ ಎಂದು ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಖುಷಿಯಾಗಿರುವ ಆಲಿಯಾ, ‘ಅದಕ್ಕಿಂತ ಖುಷಿಯ ವಿಷಯ ಬೇರೇನಿದೆ? ಡೀಲ್ ಆಯ್ತು’ ಎಂದು ಉತ್ತರಿಸಿದ್ದಾರೆ.