ಎಂಗೇಜ್ಮೆಂಟ್ ಆದ್ಮೇಲೆ ಬ್ರೇಕ್ ಅಪ್ ಮಾಡಿಕೊಂಡು ನಟಿ..ಕಾರಣ ಏನು ಗೊತ್ತಾ..?? ಗ್ರಾಂಡ್ ಆಗಿ ನಡೆಯಬೇಕಿದ್ದ ಮದುವೆ ಮುರಿದು ಬೀಳಲು ಕಾರಣವೇನು??
Monday, July 5, 2021
ನಟಿ ಮೆಹ್ರೀನ್ ಪಿರ್ಜಾದಾ ಅವರ ಮದುವೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ ಭವ್ಯ ಬಿಷ್ಣೋಯ್ ಜೊತೆ ನಿಶ್ಚಯವಾಗಿತ್ತು. ಆದರೆ ಈಗ ನಿಶ್ಚಿತಾರ್ಥವೇ ಮುರಿದುಬಿದ್ದಿದೆ.
ಈ ಕುರಿತು ಹೇಳಿಕೆ ನೀಡಿರುವ ಮೆಹ್ರೀನ್, 'ನಾನು ಮತ್ತು ಭವ್ಯ ಬಿಷ್ಣೋಯ್ ನಮ್ಮ ನಿಶ್ಚಿತಾರ್ಥವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದು, ಮದುವೆ ಆಗುವುದಿಲ್ಲ. ನಮ್ಮಿಬ್ಬರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಇಬ್ಬರು ಸೇರಿ ಸ್ವಹಿತಾಸಕ್ತಿಯಿಂದ ತೆಗೆದುಕೊಂಡ ನಿರ್ಧಾರ ಇದಾಗಿದೆ. ಇಂದಿನಿಂದ ಭವ್ಯ ಬಿಷ್ಣೋಯ್ ಅವರೊಂದಿಗೆ ಹಾಗೂ ಅವರ ಕುಟುಂಬದ ಯಾವುದೇ ಸದಸ್ಯರೊಂದಿಗೆ ಅಥವಾ ಸ್ನೇಹಿತರೊಂದಿಗೆ ಒಡನಾಟವನ್ನು ಇಟ್ಟುಕೊಳ್ಳುತ್ತಿಲ್ಲ ಎಂದು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ' ಎಂದು ಮೆಹ್ರೀನ್ ತಿಳಿಸಿದ್ದಾರೆ.
'ಇದು ನನ್ನ ಕಡೆಯಿಂದ ನಾನು ನೀಡುತ್ತಿರುವ ಏಕೈಕ ಹೇಳಿಕೆಯಾಗಿದೆ. ಜೊತೆಗೆ ನನ್ನ ಖಾಸಗಿತವನ್ನು ಎಲ್ಲರೂ ಗೌರವಿಸುತ್ತೀರಿ ಎಂದು ಭಾವಿಸಿದ್ದೇನೆ. ಇನ್ನು, ಎಂದಿನಂತೆ ಸಿನಿಮಾ ಕೆಲಸಗಳಲ್ಲಿ ನಾನು ಮುಂದುವರಿಯುತ್ತೇನೆ. ಎಂದಿದ್ದಾರೆ.
ಮದುವೆ ಮುರಿದು ಹೋಗಲು ನಿಖರ ಕಾರಣವೇನೆಂಬುದು ತಿಳಿದುಬಂದಿಲ್ಲ.