ತವರು ಮನೆ ಸೇರಿದ ಪತ್ನಿ..ನಿರಂತರ ಕರೆಮಾಡಿ ಕಾಟ ಕೊಡುತ್ತಿದ್ದ ಪತಿ.. ಮುಂದಾಗಿದ್ದು ಏನು ಗೊತ್ತಾ..??
Monday, July 5, 2021
ಮೈಸೂರು: ಗಂಡನ ಕಿರುಕುಳ ಸಹಿಸಲಾಗದೆ ತವರು ಮನೆಗೆ ಹೋಗಿದ್ದ ಯುವತಿ ಸಾವನ್ನಪ್ಪಿದ್ದಾಳೆ.
ಸೌಮ್ಯಾ(26) ಮೃತ ದುರ್ದೈವಿ. ಸೌಮ್ಯಾಗೆ ಮೂರು ವರ್ಷದ ಹಿಂದೆ ಗೌತಮ್ ಎಂಬಾತನ ಜತೆ ವಿವಾಹವಾಗಿತ್ತು. ಮದುವೆ ಆದಾಗಿನಿಂದ ವರದಕ್ಷಿಣೆ ತರುವಂತೆ ಸೌಮ್ಯಾಗೆ ಗಂಡ ಮತ್ತು ಆತನ ಮನೆಯವರು ಕಿರುಕುಳ ಕೊಡುತ್ತಿದ್ದು, ಇದನ್ನು ಸಹಿಸಲಾಗದೆ ಸೌಮ್ಯಾ 6 ತಿಂಗಳ ಹಿಂದೆಯೇ ತವರು ಮನೆ ಸೇರಿದ್ದರೂ ಆಕೆಯ ಗಂಡ ಪದೇ ಪದೇ ಕರೆ ಮಾಡಿ ಹಣ ತರುವಂತೆ ಪೀಡಿಸುತ್ತಿದ್ದ.
ಇದೀಗ ಸೌಮ್ಯ ತವರು ಮನೆಯಲ್ಲೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಡ ಮತ್ತು ಅತ್ತೆ ಕಿರುಕುಳ ಸಹಿಸಲಾಗದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಆರೋಪಿಸಿದ್ದಾರೆ. ನಂಜನಗೂಡಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.