ಅದೃಷ್ಟ ಅನ್ನೋದು ಕೈ ಹಿಡಿದ್ರೆ ಯಾರು ಏನು ಬೇಕಾದರೂ ಆಗಬಹುದು ಅನ್ನೋದಕ್ಕೆ ಈ ಕಥೆ ಸಾಕ್ಷಿ...!!
Monday, July 5, 2021
ದುಬೈ: ಅದೃಷ್ಟ ಅನ್ನೋದು ಕೈ ಹಿಡಿದ್ರೆ ಯಾರು ಏನು ಬೇಕಾದರೂ ಆಗಬಹುದು ಅನ್ನೋದಕ್ಕೆ ಈ ಕಥೆ. ಸಾಕ್ಷಿಯಾಗಿದೆ. ಕೇರಳದಿಂದ ದುಬೈಗೆ ಹೋಗಿ ಡ್ರೈವರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವ್ಯಕ್ತಿ ಇದೀಗ 40 ಕೋಟಿ ರೂಪಾಯಿಯ ಒಡೆಯನಾಗಿದ್ದಾನೆ.
ಕೇರಳ ಮೂಲದ ರಂಜಿತ್ ಸೋಮರಾಜನ್ (37) ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಮೂರು ವರ್ಷಗಳಿಂದ ರಂಜಿತ್ ಮತ್ತು ಆತನ ಸ್ನೇಹಿತರು ಲಾಟರಿ ಟಿಕೆಟ್ ಖರೀದಿಸುತ್ತಿದ್ದಾರಂತೆ. ಅದೇ ರೀತಿ 10 ಜನ ಸ್ನೇಹಿತರು ಸೇರಿಕೊಂಡು ಜೂನ್ 29ರಂದು ರಂಜಿತ್ ಹೆಸರಿಗೆ ಲಾಟರಿ ಟಿಕೆಟ್ ಖರೀದಿಸಿದ್ದರು. ಆ ಲಾಟರಿಯಲ್ಲಿ ಎರಡು ಅಥವಾ ಮೂರನೇ ಬಹುಮಾನ ಬರಬಹುದು ಎನ್ನುವ ನಂಬಿಕೆ ರಂಜಿತ್ಗೆ ಇತ್ತಂತೆ. ಆದರೆ ಮೊದಲನೇ ಬಹುಮಾನವೇ ಬಂದುಬಿಟ್ಟಿದೆ. ಈ ಮೂಲಕ 40 ಕೋಟಿ ರೂಪಾಯಿ ರಂಜಿತ್ ಮತ್ತು ಆತನ ಸ್ನೇಹಿತರು ಗೆದ್ದಿದ್ದಾರೆ.