ಆಮೀರ್ ಖಾನ್ರ ಮೊದಲನೇ ಹೆಂಡತಿ ರೀನಾ ದತ್ತ. ಅವರನ್ನು ಚಿಕ್ಕ ವಯಸ್ಸಲ್ಲೇ ಪ್ರೀತಿಸಿ ಮದುವೆಯಾಗಿದ್ದರು, ಆಮೀರ್. ಆಮೀರ್ ಹಾಗೂ ರೀನಾಗೆ ಜುನೈದ್ ಖಾನ್, ಈರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 1986 ರಲ್ಲಿ ವೈವಾಹಿಕ ಜೀವನ ಆರಂಭಿಸಿದ್ದ ಈ ಜೋಡಿ, 2002 ರಲ್ಲಿ ವಿಚ್ಛೇದನ ಪಡೆದು ಬೇರೆಯಾಗಿದ್ದರು.
ಆಮೀರ್ ಅವರ ಎರಡೂ ಮದುವೆಗಳು ಅರ್ಧಕ್ಕೇ ಮುರಿದಿರುವುದು ವಿಪರ್ಯಾಸ.