ಮದುವೆ ಮನೆಯಲ್ಲೇ ವರನ ಕಪಾಳಕ್ಕೆ ಚಪ್ಪಲಿಯಿಂದ ಬಾರಿಸಿದ ತಾಯಿ.. ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ..??
Monday, July 5, 2021
ಹಮೀರಪುರ್(ಉತ್ತರ ಪ್ರದೇಶ): ವರ ತನ್ನ ಕುಟುಂಬದವರಿಗೆ ಮದುವೆಗೆ ಆಹ್ವಾನ ನೀಡದಿರುವ ಕಾರಣ ವರನ ತಾಯಿ ಮದುವೆ ಮಂಟಪದಲ್ಲಿ ಆತನಿಗೆ ಚಪ್ಪಲಿಯೇಟು ನೀಡಿರುವ ಘಟನೆ ನಡೆದಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ ಆಕೆಯನ್ನೇ ಮದುವೆಯಾಗಬೇಕು ಎಂದು ನಿಶ್ಚಯಿಸಿದ್ದ.ಆದರೆ ಇದು ವರನ ಮನೆಯವರಿಗೆ ಇಷ್ಟವಿರಲಿಲ್ಲ. ಈ ಜೋಡಿ ರಿಜಿಸ್ಟ್ರಾರ್ ಮದುವೆ ಮಾಡಿಕೊಂಡಿದ್ದರು. ಇದಾದ ಬಳಿಕ ಯುವತಿಯ ಕುಟುಂಬಸ್ಥರು ಇಬ್ಬರ ಪ್ರೀತಿಗೆ ಒಪ್ಪಿಗೆ ಸೂಚಿಸಿ, ಮದುವೆ ಮಾಡಲು ನಿರ್ಧರಿಸಿದ್ದರು.
ಯುವತಿ ಮನೆಯವರು ಅದ್ಧೂರಿಯಾಗಿ ಮದುವೆ ಏರ್ಪಡಿಸಿದ್ದ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಯುವಕನ ತಾಯಿ ಮಗನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.