-->
'ಬ್ಯಾಟ್ ಗಳು ಪಕ್ಕದ ಮನೆಯನ ಪತ್ನಿಯಿದ್ದಂತೆ...' ಹೇಳಿಕೆಗೆ ಕ್ಷಮೆ ಯಾಚಿಸಿದ ದಿನೇಶ್ ಕಾರ್ತಿಕ್

'ಬ್ಯಾಟ್ ಗಳು ಪಕ್ಕದ ಮನೆಯನ ಪತ್ನಿಯಿದ್ದಂತೆ...' ಹೇಳಿಕೆಗೆ ಕ್ಷಮೆ ಯಾಚಿಸಿದ ದಿನೇಶ್ ಕಾರ್ತಿಕ್


ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಕಾಮೆಂಟರಿ ಮಾಡಿದ್ದ ವಿಕೇಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಇದೀಗ ಇಂಗ್ಲೆಂಡ್ – ಶ್ರೀಲಂಕಾ ಸರಣಿಗೂ ವೀಕ್ಷಕ ವಿವರಣೆ ನೀಡುತ್ತಿದ್ದಾರೆ. ಆದರೆ ಇಂಗ್ಲೆಂಡ್- ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ದಿನೇಶ್ ಕಾರ್ತಿಕ್ ಹೇಳಿರುವ ಹೇಳಿಕೆಯೊಂದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಮೂರನೇ ಏಕದಿನ ಪಂದ್ಯದ ವೇಳೆ  ಅದಕ್ಕೆ ಕ್ಷಮೆ ಕೇಳಿದ್ದಾರೆ. 

"ಬ್ಯಾಟ್ ಗಳು ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಹೋಗುತ್ತದೆ. ಕೆಲ ಬ್ಯಾಟ್ಸಮನ್ ಗಳು ತಮ್ಮ ಬ್ಯಾಟನ್ನು ಯಾವತ್ತೂ ಇಷ್ಟಪಡುವುದಿಲ್ಲ. ಅವರು ಯಾವಾಗಲೂ ಮತ್ತೊಬ್ಬರ ಬ್ಯಾಟನ್ನೇ ಇಷ್ಟ ಪಡುತ್ತಾರೆ. ಬ್ಯಾಟ್ ಗಳು ಪಕ್ಕದ ಮನೆಯವನ ಪತ್ನಿಯ ಹಾಗೆ, ಯಾವಾಗಲೂ ಸುಂದರವಾಗಿ ಕಾಣುತ್ತದೆ’ ಎಂಬ ವಿವಾದಾತ್ಮಕ ಹೇಳಿಕೆಯನ್ನು ಕಾಮೆಂಟರಿ ವೇಳೆ ಹೇಳಿದ್ದರು. 

ಈ ಮಾತಿಗೆ ಮೂರನೇ ಪಂದ್ಯದ ವೇಳೆ ಕ್ಷಮೆ ಕೇಳಿರುವ ದಿನೇಶ್ ಕಾರ್ತಿಕ್ "ಕಳೆದ ಪಂದ್ಯದಲ್ಲಿನ ಹೇಳಿಕೆಗೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಇದು ನಿಜವಾಗಿಯೂ ನಾನು ಉದ್ದೇಶಿಸಿದ್ದಲ್ಲ. ನಾನು ಎಲ್ಲವನ್ನೂ ತಪ್ಪಾಗಿ ಗ್ರಹಿಸಿದೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ. ನಾನು ಹೇಳಿರುವುದು ಖಂಡಿತವಾಗಿಯೂ ಸರಿಯಾದ ವಿಷಯವಲ್ಲ. “ನಿಜವಾಗಿಯೂ ವಿಷಾದವಿದೆ. ಇದು ಪುನಾರಾವರ್ತನೆಯಾಗದು" ಎಂದು ಹೇಳಿದ್ದಾರೆ. ಅಲ್ಲದೆ "ನನ್ನ ಆ ಹೇಳಿಕೆಯ ಬಳಿಕ ನನ್ನ ಹೆಂಡತಿ ಮತ್ತು ನನ್ನ ಅಮ್ಮನಿಂದ ಸಾಕಷ್ಟು ಬಯ್ಗುಳು ಸಿಕ್ಕಿದೆ" ಎಂದು ಹೇಳುವುದನ್ನೂ ದಿನೇಶ್ ಕಾರ್ತಿಕ್ ಮರೆತಿಲ್ಲ. 

Ads on article

Advertise in articles 1

advertising articles 2

Advertise under the article