-->
ads hereindex.jpg
ಚೆಂದದ ನಟಿಯರೇಕೆ ಮಾಲ್ಡೀವ್ಸ್ ನಲ್ಲಿ ಬೋಲ್ಡ್ ಆಗಿ ಸುತ್ತುತ್ತಿದ್ದಾರೆ? ಇಲ್ಲಿದೆ ಲೀಕಾದ ಮಾಹಿತಿ

ಚೆಂದದ ನಟಿಯರೇಕೆ ಮಾಲ್ಡೀವ್ಸ್ ನಲ್ಲಿ ಬೋಲ್ಡ್ ಆಗಿ ಸುತ್ತುತ್ತಿದ್ದಾರೆ? ಇಲ್ಲಿದೆ ಲೀಕಾದ ಮಾಹಿತಿ
(ಗಲ್ಫ್ ಕನ್ನಡಿಗ) ಇತ್ತೀಚೆಗೆ ಚೆಂದದ ನಟಿಯರು ಮಾಲ್ಡೀವ್ಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುವ ಪೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.


(ಗಲ್ಫ್ ಕನ್ನಡಿಗ)ಕೊರೊನಾ ಬಳಿಕ  ಮಾಲ್ಡೀವ್ಸ್ ನಲ್ತ ಹಾಲಿಡೇ ಟ್ರಿಪ್ ಎಂದು ನಟಿಯರು ಸಾಲು ಸಾಲಾಗಿ ಬೋಲ್ಡ್ ಆಗಿರುವ ಪೊಟೋ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ.  ಇದರ ಹಿಂದೆ ಪ್ರವಾಸೋದ್ಯಮ ಕೆಲಸ ಮಾಡಿದೆ ಎಂಬ ವಿಷಯ ಲೀಕ್ ಆಗಿದೆ.


(ಗಲ್ಫ್ ಕನ್ನಡಿಗ)ಮಾಲ್ಡೀವ್ಸ್ ನ ಆರ್ಥಿಕತೆಗೆ ಪ್ರವಾಸೋದ್ಯಮ ದೊಡ್ಡ ಕೊಡುಗೆ ಇದೆ.  ಕೊರೊನಾದಿಂದ ಮುಗ್ಗರಿಸಿದ ಮಾಲ್ಡೀವ್ಸ್ ಪ್ರವಾಸೋದ್ಯಮ ಮೇಲಕ್ಕೆತ್ತಲು ಅಲ್ಲಿನ ರೆಸಾರ್ಟ್ ಮಾಲೀಕರು ಕಂಡುಕೊಂಡ ಐಡಿಯಾ ಇದಾಗಿದೆ.


(ಗಲ್ಫ್ ಕನ್ನಡಿಗ)ಚೆಂದದ  ನಟಿಯರಾದ ಶಾನ್ವಿ ಶ್ರೀವಾಸ್ತವ್, ಶರ್ಮಿಳಾ ಮಾಂಡ್ರೆ, ಪ್ರಣೀತಾ  , ವೇದಿಕಾ, ರಾಕುಲ್ ಪ್ರೀತ್ ಸಿಂಗ್, ತಾಪ್ಸಿ ಪನ್ನು, ಸಮಂತಾ, ಕಾಜಲ್ ಅಗರ್ ವಾಲ್, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ಇಲಿಯಾನ, ಕರಿನಾ ಕಪೂರ್ , ಮೌನಿ ರಾಯ್ ಮೊದಲಾದವರು ಮಾಲ್ಡೀವ್ಸ್ ನಲ್ಲಿ ಮೋಡಿ ಮಾಡಿದ್ದಾರೆ.


(ಗಲ್ಫ್ ಕನ್ನಡಿಗ)ಇವರಿಗೆ ಫ್ರೀ ಪ್ಯಾಕೆಜ್ ಟೂರ್ ಗಳನ್ನು ವ್ಯವಸ್ಥೆ ಮಾಡಿದವರು ಕೆಲವೊಂದು ಕಂಡೀಷನ್ ಗಳನ್ನು ಹಾಕಿದ್ದಾರೆ.  ಮಾಲ್ಡೀವ್ಸ್ ನಲ್ಲಿ ಇರುವಷ್ಟು ದಿನ ಕನಿಷ್ಟ 3 ಫೋಟೋಗಳನ್ನು ಬೋಲ್ಡ್ ಗ್ಲಾಮರ್ ಆಗಿ ತೆಗೆದು ಅಪ್ಲೋಡ್ ಮಾಡಬೇಕು. ಈ ಪೋಟೋಗಳಲ್ಲಿ ಅವರು ಉಳಿದುಕೊಂಡಿರುವ ಲೊಕೆಶನ್,ರೆಸ್ಟೋರೆಂಟ್ ಗಳನ್ನು ಫೋಕಸ್ ಮಾಡಬೇಕು. ಮಾಲ್ಡೀವ್ಸ್ ಕೊರೊನಾ ಫ್ರೀ ಎಂದು ಪರೋಕ್ಷವಾಗಿ ಬಿಂಬಿಸಬೇಕು ಇತ್ಯಾದಿ.


(ಗಲ್ಫ್ ಕನ್ನಡಿಗ)ಇದೀಗ ಈ ಗುಟ್ಟನ್ನು ಬಾಲಿವುಡ್ ನಟರೊಬ್ಬರು ಲೀಕ್ ಮಾಡಿದ್ದಾರೆ ಎಂದು ಹೇಳಲಾಗಿದ್ದು ಬಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2