ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಅಪ್ರಾಪ್ತ ಪುತ್ರನಿಗೆ ಬೈಕ್ ಕೊಟ್ಟ ತಂದೆಗೆ ಒಂದು ದಿನ ಜೈಲು ಶಿಕ್ಷೆ! 30,000 ರೂ. ದಂಡ


ಅಪ್ರಾಪ್ತ ಪುತ್ರನಿಗೆ ಚಲಾಯಿಸಲು ಬೈಕ್ ಕೊಟ್ಟ ತಂದೆಗೆ ತುಮಕೂರು ಜಿಲ್ಲೆಯ ಗುಬ್ಬಿ ಜೆಎಂಎಫ್‌ಸಿ ನ್ಯಾಯಾಲಯ 30,000 ರೂ. ದಂಡ ಹಾಗೂ ಒಂದು ದಿನ ಜೈಲು ಶಿಕ್ಷೆ ವಿಧಿಸಿದೆ. 

ಕಳೆದ ವರ್ಷ ಅಕ್ಟೋಬರ್ 31ರಂದು ಅಪ್ರಾಪ್ತ ಪುತ್ರನಿಗೆ ದ್ವಿಚಕ್ರ ವಾಹನವನ್ನು ತಂದೆ ನೀಡಿದರು. ಆತ ತುಮಕೂರಿನಿಂದ ಚಾಲನೆ ಮಾಡಿಕೊಂಡು ಬರುವಾಗ ರಾತ್ರಿ ಗುಬ್ಬಿಬೈಪಾಸ್‌ನ ಸಿಐಟಿ ಕಾಲೇಜು ಹಿಂಭಾಗ ರಸ್ತೆ ಪಕ್ಕದಲ್ಲಿದ್ದ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೊಡೆದಿದ್ದ. ಈ ಸಂಬಂಧ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಸಂಬಂಧ ನ್ಯಾಯಾಲಯ ಅಪ್ರಾಪ್ತ ಪುತ್ರನಿಗೆ ಬೈಕ್ ಕೊಟ್ಟ ತಂದೆಗೆ 1 ದಿನ ಜೈಲು ಶಿಕ್ಷೆ ಮತ್ತು 30,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW