![ಫೇಸ್ಬುಕ್ ನಲ್ಲಿ ಯುವತಿಯರಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ವಿಕೃತ ಕಾಮುಕ ಅರೆಸ್ಟ್..!! ಫೇಸ್ಬುಕ್ ನಲ್ಲಿ ಯುವತಿಯರಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ವಿಕೃತ ಕಾಮುಕ ಅರೆಸ್ಟ್..!!](https://blogger.googleusercontent.com/img/b/R29vZ2xl/AVvXsEhEHFHjpRU9265jopCadglD8zzfZ5KuuNxyg07aefubLGScjiI73Z126DvWT7XzS4Dci90_gEuBvNNHcnL0sXi_glkOkq1LxKyTJFDFx1UT2ulnSl9UzLTFOjndsGn5yj0eP4tmn3owmRzo/s1600/1654181671729109-0.png)
ಫೇಸ್ಬುಕ್ ನಲ್ಲಿ ಯುವತಿಯರಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ವಿಕೃತ ಕಾಮುಕ ಅರೆಸ್ಟ್..!!
Thursday, June 2, 2022
ಬೆಂಗಳೂರು: ಕಂಡ ಕಂಡ ಮಹಿಳೆಯರಿಗೆ ಅಶ್ಲೀಲ ಫೋಟೋ, ವಿಡಿಯೋ ಕಳುಹಿಸುತ್ತಿದ್ದಾತನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮಡಿವಾಳದ ಜೈಭೀಮ್ ನಗರದ ಪುರುಷೋತ್ತಮ್(40) ಬಂಧಿತ. ಈತ ಜೋಮ್ಯಾಟೊ ಡೆಲವರಿ ಕೆಲಸ ಮಾಡುತ್ತಿದ್ದ. ಫೇಸ್ಬುಕ್ ಖಾತೆ ತೆರೆದು ದೇಶ, ವಿದೇಶದ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ನಂತರ ಮೇಸೆಂಜರ್ನಲ್ಲಿ ಮಹಿಳೆಯರಿಗೆ ಅಪ್ರಾಪ್ತರ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿ ವಿಕೃತಿ ಮೆರೆಯುತ್ತಿದ್ದ.
ಈ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳು ಸಿಇಎನ್ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.