Header Ad

ಕೇರಳದ ಕೊಟ್ಟಾಯಂ ನಿಂದ ಉಡುಪಿ Trip ಬಂದಿದ್ದ ಮೂವರು ವಿದ್ಯಾರ್ಥಿಗಳು ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಮುಳುಗಿ ಸಾವು


ಉಡುಪಿಯ  ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ  ಮೂಲದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇಬ್ಬರ ಮೃತ ದೇಹ ಪತ್ತೆಯಾಗಿದೆ. 

ಇನ್ನೊಬ್ಬ ವಿದ್ಯಾರ್ಥಿಯ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ
ಕೇರಳ ರಾಜ್ಯದ ಕೊಟ್ಟಾಯಂ ನ ಮಂಗಳಂ ಇಂಜಿನಿಯರಿಂಗ್ ಕಾಲೇಜಿನ ಅಲೆನ್ ರೇಜಿ (22), ಅಮಲ್ ಸೀ ಅನಿಲ್( 22) ಮತ್ತು ಆ್ಯಂಟನಿ ಶೆಣೈ (21) ಮೃತ ವಿದ್ಯಾರ್ಥಿಗಳು.  

ಕೊಟ್ಟಾಯಂ ನಿಂದ 42 ವಿದ್ಯಾರ್ಥಿಗಳು ಮತ್ತು ಇಬ್ಬರು ಪ್ರಾಧ್ಯಾಪಕರ ಜೊತೆ ಪ್ರವಾಸಕ್ಕೆ ಬಂದಿದ್ದು, ಸೈಂಟ್ ಮೇರಿಸ್ ಅಪಾಯಕಾರಿ ಸಮುದ್ರ ಭಾಗದಲ್ಲಿ ನೀರಿನಲ್ಲಿ ಆಟವಾಡಲು ಇಳಿದಾಗ, ಆಕಸ್ಮಿಕವಾಗಿ ಮುಳುಗಡೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇತ್ತೀಚಿನ ಸುದ್ದಿಗಳು