ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಮಂಗಳೂರಿನಲ್ಲಿ ಟಿವಿ ನೋಡಲು ಹೋದ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ- ಯುವಕ ಅಂದರ್!

 10 ವರ್ಷದ ಬಾಲಕಿಯೊಬ್ಬಳು ಶಾಲೆ ಮುಗಿಸಿ ಮನೆಗೆ ಬಂದ ನಂತರ ಟಿ ವಿ ನೋಡಲು ಪಕ್ಕದ ಮನೆಗೆ ತೆರಳಿದ್ದ ವೇಳೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

ಬಾಲಕಿಯ ನೆರೆ ಮನೆಯ ನಿತೇಶ್ ರಿತಿನ್ @ ನಿತಿನ್ (19) ಎಂಬವನು ಈ ಕೃತ್ಯವೆಸಗಿದವನು. ಬಾಲಕಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಶಾಲೆ ಮುಗಿದ ಬಳಿಕ ಪಕ್ಕದ ಮನೆಗೆ ಟಿವಿ ನೋಡಲು ಬಂದಿದ್ದಳು.

ಈತ ಮನೆಗೆ ಬಂದ ಹೆಣ್ಣು ಮಗುವಿಗೆ ಲೈಂಗಿಕ  ಕಿರುಕುಳ ನೀಡಿದ್ದು ಈ ವೇಳೆ ಬಾಲಕಿ ಹೆದರಿ ಅಲ್ಲಿಂದ ಓಡಿ ತನ್ನ ಮನೆಗೆಯೊಳಗಡೆಗೆ ಹೋಗಿದ್ದಾಳೆ.

 ಆರೋಪಿ‌ ಬಾಲಕಿಯ ಮನೆಯೊಳಗೆ ಅಕ್ರಮ ಪ್ರವೇಶಿಸಿ ನಡೆದ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಯಿಸುತ್ತೆನೆ ಎಂಬುದಾಗಿ ಜೀವ ಬೆದರಿಕೆ ಯನ್ನು ಹಾಕಿದ್ದಾನೆ.

ಈ ಬಗ್ಗೆ ಲಿಖಿತ ದೂರು ನೀಡಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಅ ಕ್ರ 02/2022 ಕಲಂ 354,447,506, ಐ ಪಿಸಿ ಹಾಗೂ ಕಲಂ 7,8 ಪೋಕ್ಸೋ ಕಾಯ್ದೆ ಯಂತೆ ಪ್ರಕರಣ ದಾಖಿಲಿಸಿಕೊಂಡು ಆರೋಪಿಯನ್ನು ‌ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW