ಜಗದ್ಗಿರಿಗುಟ್ಟದ ನಿವಾಸಿ ಅನಿಲ್ ಎಂಬಾತ ಕುಟ್ಚ್ಬುಲಪುರ್ ಬ್ಯಾಂಕ್ ಕಾಲನಿಯಲ್ಲಿರುವ ಮತ್ತೊಂದು ಮಹಿಳೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಕೆಲವು ದಿನಗಳಿಂದ ಗಂಡನ ನಡವಳಿಕೆಯಲ್ಲಿ ಉಂಟಾದ ವ್ಯತ್ಯಾಸದಿಂದ ಪತ್ನಿ ರಾಮೇಶ್ವರಿಗೆ ಅನುಮಾನ ಮೂಡಿತ್ತು. ಬಳಿಕ ಪತಿಯನ್ನು ಹಿಂಬಾಲಿಸಿದ ರಾಮೇಶ್ವರಿ, ಬೇರೊಂದು ಮಹಿಳೆಯ ಜತೆ ಗಂಡ ಇರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾಳೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.