ಆರ್ಜಿವಿ ತಾವು ಮಾಡಿರುವ ಮುಂದಿನ ಹಾಟ್ ಆ್ಯಂಡ್ ಬೋಲ್ಡ್ ಸಂದರ್ಶನದಲ್ಲಿ ಆಶು ರೆಡ್ಡಿ ಭಾಗಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೊಮೋವನ್ನು ತಮ್ಮ ಆರ್ಜಿವಿ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರೊಮೋದಲ್ಲಿ ಆರ್‌ಜಿವಿ ಕಾಫಿ ಶಾಪ್ ಒಂದಕ್ಕೆ ಪ್ರವೇಶಿಸಿದಾಗ ಆಶು ರೆಡ್ಡಿ ಕಾಫಿ ಕುಡಿಯುತ್ತಾ ಕುಳಿತಿರುತ್ತಾರೆ. ಅವಳೊಂದಿಗೆ ಮಾತನಾಡಲು ಪ್ರಯತ್ನಿಸುವ ಆರ್ಜಿವಿ, ಆರಂಭದಲ್ಲೇ ನಿಮ್ಮ ತೊಡೆ ಅಂದ್ರೆ ನನಗೆ ತುಂಬಾ ಇಷ್ಟ ಅನ್ನುತ್ತಾನೆ. ಹೀಗಂದ ತಕ್ಷಣವೇ ಆಶು ರೆಡ್ಡಿ, ಆರ್ಜಿವಿ ಕೆನ್ನೆಗೆ ಬಾರಿಸುತ್ತಾಳೆ. ಇದಿಷ್ಟು ಬಿಡುಗಡೆಯಾಗಿರುವ ಪ್ರೊಮೋದಲ್ಲಿದೆ. ಈ ವಿಡಿಯೋ ಸಂಬಂಧ ತಮ್ಮ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿರುವ ಆರ್ಜಿವಿ, ಇದು ಮುಂದಿನ ನನ್ನ ಸಂದರ್ಶನದ ಪ್ರೊಮೋ ಆಗಿದೆ, ಇದನ್ನು ಹಾಸ್ಯಾತ್ಮಕ ರೀತಿಯಲ್ಲಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇವೆಂದು ಹೇಳಿದ್ದಾರೆ.