![ಬ್ಲೂಫಿಲ್ಮ್ ಪ್ರಕರಣದಲ್ಲಿ ಸಿಲುಕಿರುವ ರಾಜ್ ಕುಂದ್ರಾರನ್ನು ಶಿಲ್ಪಾ ತೊರೆಯುವರೆಂಬ ಗುಸು ಗುಸು? ಬ್ಲೂಫಿಲ್ಮ್ ಪ್ರಕರಣದಲ್ಲಿ ಸಿಲುಕಿರುವ ರಾಜ್ ಕುಂದ್ರಾರನ್ನು ಶಿಲ್ಪಾ ತೊರೆಯುವರೆಂಬ ಗುಸು ಗುಸು?](https://blogger.googleusercontent.com/img/b/R29vZ2xl/AVvXsEjoDrwZ_vfv9ZbXGWqdZeFEm-1m8nKNseKfoHMtRX04NhNgrRrPocN5CTLZp5ByC87a5Wov0dp3V0i1gqxN8FhSQj9ah7zRYW0LJRR5nUUTfyFQRCR_8rBHKFy1lFfHfwdfbCBotp8i2mU/s1600/1630496451648786-0.png)
ಬ್ಲೂಫಿಲ್ಮ್ ಪ್ರಕರಣದಲ್ಲಿ ಸಿಲುಕಿರುವ ರಾಜ್ ಕುಂದ್ರಾರನ್ನು ಶಿಲ್ಪಾ ತೊರೆಯುವರೆಂಬ ಗುಸು ಗುಸು?
Wednesday, September 1, 2021
ಮುಂಬೈ: ಬ್ಲೂಫಿಲ್ಮ್ ವೀಡಿಯೋ ದಂಧೆಯಲ್ಲಿ ಸಿಕ್ಕಿಹಾಕಿಕೊಂಡಿರುವ ರಾಜ್ ಕುಂದ್ರಾರನ್ನು ದಾಂಪತ್ಯ ಜೀವನದಿಂದ ಶಿಲ್ಪಾ ಶೆಟ್ಟಿಯವರು ದೂರವಿಟ್ಟಿದ್ದಾರೆ ಎಂಬ ವಿಚಾರವೊಂದು ಬಿಟೌನ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ.
ರಾಜ್ ಕುಂದ್ರಾ ಈ ರೀತಿಯ ಉದ್ಯಮವನ್ನು ಶಿಲ್ಪಾ ಶೆಟ್ಟಿಗೆ ಗೊತ್ತಿಲ್ಲದೆ ಮಾಡಿದ್ದಾರಾ..? ಇದರಲ್ಲಿ ಶಿಲ್ಪಾ ಶೆಟ್ಟಿಯೂ ಭಾಗಿಯಾಗಿರಬಹುದು ಎಂಬೆಲ್ಲಾ ವಿಚಾರಗಳು ಸಾಕಷ್ಟು ಚರ್ಚೆಯಾಗಿದ್ದವು. ಆ ವಿಚಾರದಲ್ಲಿ ಶಿಲ್ಪಾ ಶೆಟ್ಟಿ ಕೂಡ ಸಾಕಷ್ಟು ಕುಗ್ಗಿ ಹೋಗಿದ್ದರು. ಇದು ಅವರ ಸಿನಿಮಾ ಜೋವನಕ್ಕೂ ಒಂದಷ್ಟು ತೊಂದರೆ ಕೊಡಲಿದೆಯೇ ಎಂಬ ಭೀತಿಯೂ ಅವರಿಗೆ ಇದ್ದಂತಿದೆ.
ಇನ್ನು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಲ್ಪಾ ಶೆಟ್ಟಿ ದೂರ ಆಗ್ತಾರೆ ಅನ್ನೋ ಗುಸುಗುಸು ಕೂಡ ಕೇಳಿ ಬರ್ತಾ ಇದೆ. ಸದ್ಯಕ್ಕೆ ಗಂಡನಿಲ್ಲದ ಮನೆ ಬಿಟ್ಟು ಬೇರೆ ಮನೆಯಲ್ಲಿ ವಾಸ ಮಾಡುತ್ತುದ್ದಾರೆ ಎಂಬ ಕೂಡ ಸುದ್ದಿ ಕೇಳಿ ಬರುತ್ತಿದೆ. ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಇದಕ್ಕೆಲ್ಲಾ ಶಿಲ್ಪಾ ಶೆಟ್ಟಿಯೇ ಉತ್ತರ ಕೊಡಬೇಕಾಗಿದೆ.