-->
ಅತ್ಯಾಚಾರ ಪ್ರಕರಣ: ಯುವತಿಯ ಅಣ್ಣನ ಮರ್ಮಾಂಗವನ್ನೇ ಕತ್ತರಿಸಿದರು ದುಷ್ಕರ್ಮಿಗಳು...

ಅತ್ಯಾಚಾರ ಪ್ರಕರಣ: ಯುವತಿಯ ಅಣ್ಣನ ಮರ್ಮಾಂಗವನ್ನೇ ಕತ್ತರಿಸಿದರು ದುಷ್ಕರ್ಮಿಗಳು...

 ಸುಲ್ತಾನಪುರ್​: ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಜೈಲಿಗೆ ಹೋಗಿ ಬಂದಿದ್ದ ಕಾಮುಕರು ಇದೀಗ ಆಕೆಯ ಸಹೋದರನ ಮರ್ಮಾಂಗ ಕತ್ತರಿಸಿದ್ದಾರೆ.

2019ರಲ್ಲಿ ಯುವತಿ ಮೇಲೆ ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯುವತಿಯ ಸಹೋದರ ಪ್ರಕರಣ ದಾಖಲಿಸಿದ್ದ. ಆರೋಪಿಗಳನ್ನು ಬಂಧಿಸಲಾಗಿತ್ತು. ಇತ್ತೀಚಿಗೆ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಆರೋಪಿಗಳು, ಅತ್ಯಾಚಾರ ಕೇಸ್​ ಸಂಬಂಧ ರಾಜಿ ಮಾಡಿಕೊಳ್ಳುವಂತೆ ಯುವತಿಯ ಸಹೋದರನಿಗೆ ಬೆದರಿಕೆ ಹಾಕಿದ್ದರು. ಇದಕ್ಕೆ ಆತ ಒಪ್ಪದ ಕಾರಣ ಆತನ ಮರ್ಮಾಂಗ ಕತ್ತರಿಸಿದ್ದಾರೆ.

ಗಾಯಾಳುವಿನ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99