'OLX' ನಲ್ಲಿ ಹಳೆ ಚಪ್ಪಲಿ ಮಾರಾಟಕ್ಕಿಟ್ಟ ಲಕ್ಷ ಲಕ್ಷ ಕಳೆದುಕೊಂಡ ಯುವಕ...

 
ಬೆಂಗಳೂರು: ‘ಓಎಲ್‌ಎಕ್ಸ್‌’ ಜಾಲತಾಣದಲ್ಲಿ ತಮ್ಮ ಹಳೇ ಚಪ್ಪಲಿ ಹಾಗೂ ಶೂಗಳನ್ನು  ಮಾರಾಟಕ್ಕಿಟ್ಟಿದ್ದ ನಗರದ ಯುವಕರೊಬ್ಬರು ₹ 1.05 ಲಕ್ಷ ಕಳೆದುಕೊಂಡಿದ್ದಾರೆ. 

ಯುವಕ, ‘ಹಳೇ ಚಪ್ಪಲಿ ಹಾಗೂ ಶೂ ಮಾರಾಟಕ್ಕಿದೆ’ ಎಂದು ಓಎಲ್‌ಎಕ್ಸ್ ಜಾಲತಾಣದಲ್ಲಿ ಫೋಟೊ ಸಮೇತ ಜಾಹೀರಾತು ನೀಡಿದ್ದರು. ಅದನ್ನು ನೋಡಿ ಕರೆ ಮಾಡಿದ್ದ ಆರೋಪಿ, ಚಪ್ಪಲಿ ಹಾಗೂ ಶೂ ಖರೀದಿ ಮಾಡುವುದಾಗಿ ಹೇಳಿದ್ದ.’ ‘ಮುಂಗಡವಾಗಿ ಹಣ ಹಾಕುವುದಾಗಿ ತಿಳಿಸಿದ್ದ ಆರೋಪಿ, ಕೆಲ ಮಾಹಿತಿ ಪಡೆದಿದ್ದ. ‘ಗೂಗಲ್ ಪೇ ಆ್ಯಪ್‌ಗೆ ಹಣ ಕಳುಹಿಸಿದ್ದೇನೆ. ಪರಿಶೀಲಿಸಿ’ ಎಂದಿದ್ದ. ಅದನ್ನು ನಂಬಿದ್ದ ಯುವಕ, ಆ್ಯಪ್ ತೆರೆದು ನೋಡುವಷ್ಟರಲ್ಲೇ ಖಾತೆಯಿಂದ ಹಂತ ಹಂತವಾಗಿ ₹ 1.05 ಲಕ್ಷ ಕಡಿತವಾಗಿದೆ. ನಂತರ, ಆರೋಪಿ ಸಹ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ’ ಎಂದೂ ಮೂಲಗಳು ತಿಳಿಸಿವೆ. 

ಯುವಕ ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.