ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

Mangalore- ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಿ ಸಿಕ್ಕಿಬಿದ್ದರು.. ಇವರ ಬಳಿ ಇದ್ದದ್ದು 703 ಗ್ರಾಂ ಚಿನ್ನ!


ಮಂಗಳೂರು; ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಕೇರಳದ ಇಬ್ಬರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಕೇರಳ ರಾಜ್ಯದ ಕೊಯಿಕ್ಕೊಡ್ ನ ಮೊಹಮ್ಮದ್ ಮೂಸ ಮಿಯಾಸ್ (18)ಉಪ್ಪಳದ ಮೊಹಮ್ಮದ್ ಅನ್ಸಾರ್ ಕಯ್ಯಾರ್ (34) ಎಂಬಿಬ್ಬ ಪ್ರಯಾಣಿಕರು ಇಂದು ದುಬೈನಿಂದ ಬಂದಿದ್ದರು. ಇವರು ತಮ್ಮ ಸೂಟ್ ಕೇಸ್ ಕೆಳಭಾಗದಲ್ಲಿ ಚಿನ್ನವನ್ನು ಪೌಡರ್ ರೂಪದಲ್ಲಿ ತಂದು ಸಾಗಾಟ ಮಾಡಿದ್ದಾರೆ. ಇವರನ್ನು ತಪಾಸಣೆ ಮಾಡುವ ವೇಳೆ ಇವರ ಬಳಿ 703 ಗ್ರಾಂ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ರೂ 3446464 ಆಗಿದೆ. ಚಿನ್ನ ಮತ್ತು ಇಬ್ಬರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ

ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW