-->
ads hereindex.jpg
ತಾನು ಪ್ರೀತಿಸಿದ ಹುಡುಗಿ ಬೇರೆಯವರ ಪಾಲಾಗಬಾರದೆಂದು ಯೂಟ್ಯೂಬ್ ನೋಡಿ ಈ ಯುವಕ ಮಾಡಿದ್ದು ಎಂತಹ ಕೃತ್ಯ ಗೊತ್ತಾ?

ತಾನು ಪ್ರೀತಿಸಿದ ಹುಡುಗಿ ಬೇರೆಯವರ ಪಾಲಾಗಬಾರದೆಂದು ಯೂಟ್ಯೂಬ್ ನೋಡಿ ಈ ಯುವಕ ಮಾಡಿದ್ದು ಎಂತಹ ಕೃತ್ಯ ಗೊತ್ತಾ?

 
ಹೈದರಾಬಾದ್​: ತಾನು ಪ್ರೀತಿಸುವ ಯುವತಿ ತನ್ನನ್ನು ಪ್ರೀತಿಸಬೇಕೆಂದು ಎಷ್ಟೇ ಕಾಡಿದರೂ ಆಕೆ ಆತನನ್ನು ನಿರಾಕರಿಸುತ್ತಾಳೆ. ಅಷ್ಟಕ್ಕೆ ಸುಮ್ಮನಾಗದ ಯುವಕ ಹೇಗಾದರೂ ಮಾಡಿ ಆಕೆ ಪ್ರೀತಿಸುವಂತೆ ಮಾಡಬೇಕು ಎಂದು ಮಾಡಿದ ಪ್ಲಾನ್ ನಿಂದಾಗಿ ಈಗ ಜೈಲು ಸೇರಿದ್ದಾನೆ.
 
ಮುರಳಿ ಬಂಧಿತ ಯುವಕ. ತಪ್ಪಾದ ಕರೆಯಿಂದಾಗಿ ಮುರಳಿಗೆ ಕೆಲವು ದಿನಗಳ ಹಿಂದೆ ಯುವತಿಯೊಬ್ಬಳ ಪರಿಚಯವಾಗುತ್ತದೆ. ನಂತರ ಆಗಾಗ ಕರೆ ಮಾಡುವ ಮೂಲಕ ಒಬ್ಬರಿಗೊಬ್ಬರು ಫ್ರೆಂಡ್ಸ್​ಗಳಾಗುತ್ತಾರೆ. ಹೀಗಿರುವಾಗ ಮುರಳಿಗೆ ಆಕೆಯ ಮೇಲೆ ಮನಸ್ಸಾಗಿ ಪ್ರೀತಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ, ಅದನ್ನು ಆಕೆ  ನಿರಾಕರಿಸುತ್ತಾಳೆ. ಈ ಸಂದರ್ಭದಲ್ಲಿ ಯುವತಿಗೆ ಬೇರೊಬ್ಬರ ಜತೆಯಲ್ಲಿ ಮದುವೆ ಆಗುತ್ತದೆ. ಈ ವಿಚಾರ ಮುರಳಿಗೆ ತಿಳಿದು, ಆಂತಕಕ್ಕೀಡಾಗುತ್ತಾನೆ. ಅಲ್ಲದೆ, ಯುವತಿಯ ಗಂಡನಿಗೆ ಕರೆ ಮಾಡಿ ಬೆದರಿಕೆ ಸಹ ಹಾಕುತ್ತಾನೆ.

ಇಷ್ಟಕ್ಕೆ ಸುಮ್ಮನಾಗದ ಯುವಕ ಮುಂದೆ ಆಯ್ದುಕೊಳ್ಳುವ ದಾರಿ ವಾಮಾಚಾರ. ಆಕೆಯ ಮನೆಯ ಮುಂದೆ ನಿಂಬೆ ಹಣ್ಣು, ಕೇಸರಿ, ಚಿಂದಿ ಬಟ್ಟೆ ಹಾಗೂ ಮೂಳೆಗಳು ಸೇರಿದಂತೆ ಮುಂತಾದ ಭಯ ಹುಟ್ಟಿಸುವಂತಹ ವಸ್ತುಗಳನ್ನು ಎಸೆಯುತ್ತಾನೆ. ಇದನ್ನು ನೋಡಿದ ಯುವತಿಗೆ  ಗಾಬರಿಯಾಗುತ್ತದೆ. ಇತ್ತ ಮುರಳಿಯ ವರ್ತನೆಯಿಂದ ಬೇಸತ್ತ ಯುವತಿ ಪೊಲೀಸ್​ ಠಾಣೆಗೆ ದೂರು ನೀಡುತ್ತಾಳೆ.

ಬಳಿಕ  ಪೊಲೀಸರಿಗೆ ವಿಚಾರಣೆ ನಡೆಸಿದಾಗ ತಾನು ಯೂಟ್ಯೂಬ್​ ಚಾನೆಲ್​ ನೋಡಿ ವಾಮಾಚಾರ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. 

  

Ads on article

Advertise in articles 1

advertising articles 2