ಕವಿತಾ(10) ಮತ್ತು ಸಂಜನಾ(9) ಮೃತ ದುರ್ದೈವಿಗಳು. ಇವರ ಪಾಲಕರು ಹುಲಿಹೈದರ ಗ್ರಾಮ ವ್ಯಾಪ್ತಿಯ ವಿಶ್ವನಾಥ ರೆಡ್ಡಿ ಅವರ ಹೊಲದಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದರು. ಈ ವೇಳೆ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಸ್ನಾನ ಮಾಡಲೆಂದು ಹೋಗಿದ್ದ ಬಾಲಕಿಯರಿಬ್ಬರೂ ಹೊಂಡಕ್ಕೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಮಕ್ಕಳ ಶವಗಳನ್ನು ಹೊರ ತೆಗೆಯಲಾಗಿದ್ದು, ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.