ಆರೋಪಿ ನಾಗೇಶ್ ಪೊದಲಕುರ್ ಎಸ್ಬಿಐ ಶಾಖೆಯಲ್ಲಿ ಎಸ್ಬಿಐ ಮ್ಯಾನೇಜರ್ ಆಗಿದ್ದಾರೆ. ಈತನ ವಿರುದ್ಧ ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪವಿದೆ. ಅಲ್ಲದೆ, ಈತನ ಕಿರುಕುಳ ತಾಳದೇ ಕೆಲವು ಉದ್ಯೋಗಿಗಳು ಸ್ವಯಂ ವರ್ಗಾವಣೆ ತೆಗೆದುಕೊಂಡಿದ್ದಾರಂತೆ. ಸಿಸಿಟಿವಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಚೆಲ್ಲಾಟ ದಾಖಲಾದ ಬಳಿಕ ಆತನ ದುಷ್ಕೃತ್ಯಗಳೆಲ್ಲ ಒಂದೊಂದಾಗಿ ಬಯಲಿಗೆ ಬಂದಿದೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮ್ಯಾನೇಜರ್ ಮಹಿಳೆಯನ್ನು ಸ್ಪರ್ಶಿಸುತ್ತಿರುವುದು ದಾಖಲಾಗಿದೆ. ಸದ್ಯ ನಾಗೇಶ್ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಗೇಶ್ ಪತ್ತೆಗೆ ಬಲೆ ಬೀಸಿದ್ದಾರೆ.