![ಕೊರನಾ ಸೋಂಕಿತ ಮೇಲೆ ಅತ್ಯಾಚಾರಕ್ಕೆ ಮುನ್ನವೇ ನಡೆದಿತ್ತು ಮತ್ತೊಂದು ಹೀನ ಕೃತ್ಯ. .. ಕೊರನಾ ಸೋಂಕಿತ ಮೇಲೆ ಅತ್ಯಾಚಾರಕ್ಕೆ ಮುನ್ನವೇ ನಡೆದಿತ್ತು ಮತ್ತೊಂದು ಹೀನ ಕೃತ್ಯ. ..](https://blogger.googleusercontent.com/img/b/R29vZ2xl/AVvXsEg0bSLwTa3CfW_OmqcJrzWJW9iGslnQAtaL4Hdhxl-B5fbl2f6PSzcx8NgTYngdq0ltpCgkcljiuepDO9MXkjLNCEmP8ZvHWtSpufPA9BbptlD2UbMq8uofw2kG_gi-te8_c-BR9YFHG8qc/s1600/1624249146411836-0.png)
ಕೊರನಾ ಸೋಂಕಿತ ಮೇಲೆ ಅತ್ಯಾಚಾರಕ್ಕೆ ಮುನ್ನವೇ ನಡೆದಿತ್ತು ಮತ್ತೊಂದು ಹೀನ ಕೃತ್ಯ. ..
Monday, June 21, 2021
ಕಲಬುರಗಿ: ಕರೊನಾ ಸೋಂಕಿತೆ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಜೈಲು ಪಾಲಾಗಿದ್ದ ಆಂಬ್ಯುಲೆನ್ಸ್ ಚಾಲಕನ ಮತ್ತೊಂದು ಮುಖ ಬಯಲಾಗಿದೆ.
ಕರೊನಾ ಸೋಂಕಿತ ಯುವತಿಯ ಮೇಲೆ ಅತ್ಯಾಚಾರ ಯತ್ನಕ್ಕೂ ಮುನ್ನವೆ ಜಿಮ್ಸ್ ಆಸ್ಪತ್ರೆಯ ಲಿಫ್ಟ್ನಲ್ಲಿ ಮಹಿಳೆಯ ಸೆರಗಿಗೆ ಕೈ ಹಾಕಿದ್ದ ಚಾಲಕ ಪಿಂಟು ಬೌನ್ಸರ್ಗಳಿಂದ ಧರ್ಮದೇಟು ತಿಂದಿದ್ದ. ಅಲ್ಲದೆ, ಮುಂದೆ ಹೀಗೆ ಮಾಡಬೇಡ ಎಂದು ಎಚ್ಚರಿಕೆ ಸಹ ನೀಡಲಾಗಿತ್ತು. ಅದಾದ ಬಳಿಕವು ಕರೊನಾ ಸೊಂಕಿತ ಯುವತಿ ಮೇಲೆ ಅತ್ಯಾಚಾರಕ್ಕೆ ಕಾಮುಕ ಯತ್ನಿಸಿ, ಜೈಲು ಪಾಲಾಗಿದ್ದಾನೆ.
ಅತ್ಯಾಚಾರ ಯತ್ನದಿಂದ ಮಾನಸಿಕವಾಗಿ ಮನನೊಂದಿದ್ದ ಕರೊನಾ ಸೋಂಕಿತೆ ಕಳೆದ ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.