-->
ಅಶ್ಲೀಲ ವೆಬ್ ಸೈಟ್ ನೋಡೋರಿಗೆ ಶಾಕಿಂಗ್ ಸುದ್ದಿ- 35 ಕ್ಕೂ ಅಧಿಕ ವೆಬ್ ಸೈಟ್ ಗಳ.....

ಅಶ್ಲೀಲ ವೆಬ್ ಸೈಟ್ ನೋಡೋರಿಗೆ ಶಾಕಿಂಗ್ ಸುದ್ದಿ- 35 ಕ್ಕೂ ಅಧಿಕ ವೆಬ್ ಸೈಟ್ ಗಳ.....

 

 
ಕ್ಯಾಲಿಫೋರ್ನಿಯಾ: ಇಲ್ಲಿನ ಸುಮಾರು 35ಕ್ಕೂ ಅಧಿಕ ಮಹಿಳೆಯರು ವಯಸ್ಕರ ವೀಡಿಯೋ ವೆಬ್​ಸೈಟ್​​ ಪೋರ್ನ್​ ಹಬ್​ ವಿರುದ್ಧ ಮಕ್ಕಳು ಸೇರಿದಂತೆ ಅನೇಕರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ವಿಡಿಯೋಗಳಿಂದ ಲಾಭ ಗಳಿಸುತ್ತಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ವಿಶ್ವದ ಅತಿದೊಡ್ಡ ವಯಸ್ಕರ ವೀಡಿಯೋ ವೆಬ್​ಸೈಟ್​ಗಳಲ್ಲಿ ಒಂದಾಗಿರುವ ಫೋರ್ನ್​ಹಬ್​​, ಮಕ್ಕಳ ಅಶ್ಲೀಲ ವೀಡಿಯೋಗಳಿಗೆ ಮಾರುಕಟ್ಟೆಯನ್ನು ಸೃಷ್ಟಿ ಮಾಡುತ್ತಿದ್ದು, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಲೈಂಗಿಕ ವಿಡಿಯೋಗಳನ್ನು ಶೇರ್​ ಮಾಡಿದೆ. ಇದರಿಂದ ಉಂಟಾದ ಹಾನಿಯನ್ನು ಕಂಪನಿಯೇ ಭರಿಸಬೇಕು ಎಂದು ದೂರದಾರರ ಪರ ವಕೀಲ ವಾದಿಸಿದ್ದಾರೆ. ಈ ಬಗ್ಗೆ ಕ್ಯಾಲಿಫೋರ್ನಿಯಾ ಯುಎಸ್​ ಜಿಲ್ಲಾ ನ್ಯಾಯಾಲಯ ಸೆಂಟರ್ಲ್​ ಡಿಸ್ಟ್ರಿಕ್ಟ್​​ನಲ್ಲಿ ಗುರುವಾರ ಕೇಸ್​ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ದೂರುದಾರರಿಗೆ ಉಂಟಾದ ಹಾನಿಗೆ ಮೈಂಡ್​ಗ್ರೀಕ್​ ಕಂಪನಿಯೇ ಹೊಣೆದಾರ ಆಗಬೇಕು ಎಂದು ಉಲ್ಲೇಖಿಸಲಾಗಿದೆ. 

ಮಹಿಳೆಯರ ಪರ ವಕೀಲರಾದ ಮೈಕೆಲ್​ ಬೋವ್​, ಮೈಂಡ್​ಗೀಕ್​ ಕಂಪನಿಯು ನಷ್ಟದ ರೂಪವಾಗಿ ಮಹಿಳೆಯರಿಗೆ ನೂರಾರು ಮಿಲಿಯನ್​ ಪಾವತಿ ಮಾಡಲು ಕೋರ್ಟ್ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ವೀಡಿಯೋ ಪೋಸ್ಟ್​ ಮಾಡಿ ವಾರಗಳೇ ಕಳೆದಿದ್ದರೂ ಸಹ ವೀಡಿಯೋವನ್ನು ಮೈಂಡ್​ಗೀಕ್​ ಕಂಪನಿ ಅಳಿಸಿ ಹಾಕಿರಲಿಲ್ಲ. ಈ ಸಮಯದಲ್ಲಿ ಅನೇಕರು ಇಂತಹ ಸಮಾಜಘಾತುಕ ವೀಡಿಯೋಗಳನ್ನು ಡೌನ್​ಲೋಡ್​ ಮಾಡಿದ್ದಾರೆ. 

ಫೋರ್ನ್​ ಹಬ್​ ವಿರುದ್ಧ ಆರೋಪ ಮಾಡಿರುವ ಸೆರೆನಾ ಪ್ಲಾಯಿಟಿಸ್​ ಎಂಬವರು 2014ರಲ್ಲಿ ಈ ಫೋರ್ನ್​ ಹಬ್​ನಲ್ಲಿ ತಮ್ಮ ಅನುಮತಿಯಿಲ್ಲದೆಯೇ ತಾವು ಬಾಯ್​ಫ್ರೆಂಡ್​ ಜೊತೆ ಬೆತ್ತಲೆಯಾಗಿದ್ದ ವೀಡಿಯೋವನ್ನು ಹರಿಯಬಿಟ್ಟಿದೆ ಎಂದು ಆರೋಪಿಸಿದ್ದಾರೆ. ಸೆರೆನಾ ಈ ಬಗ್ಗೆ ಆರೋಪ ಮಾಡಿದ ಹಲವು ವಾರಗಳ ಬಳಿಕ ಫೋರ್ನ್ ಹಬ್​ ವೀಡಿಯೋ ಡಿಲೀಟ್​ ಮಾಡಿತ್ತು ಎಂದು ಹೇಳಿದ್ದಾರೆ. ಮತ್ತೊಬ್ಬ ಮಹಿಳೆ, ಫೋರ್ನ್ ಹಬ್​ ಮಕ್ಕಳ ಅಶ್ಲೀಲ ವೀಡಿಯೋ ಪೋಸ್ಟ್​ ಮಾಡೋದು ಹಾಗೂ ಅನುಮತಿಯನ್ನು ಪಡೆಯದೆ ವ್ಯಕ್ತಿಗಳ ಖಾಸಗಿ ಕ್ಷಣಗಳ ವೀಡಿಯೋವನ್ನು ಶೇರ್​ ಮಾಡುತ್ತಿದೆ ಎಂದು ಹೇಳಿದ್ದಾರೆ. ಹೀಗಾಗಿ ಮೈಂಡ್​ಗೀಕ್​ ಕಂಪನಿಯು ಈ ನಷ್ಟವನ್ನು ಭರಿಸಿಕೊಡಬೇಕು. ವೈಯಕ್ತಿಕ ಮನರಂಜನೆಯ ಹೆಸರಿನಲ್ಲಿ ಫೋರ್ನ್​ಹಬ್​ ಅಪರಾಧ ಕೃತ್ಯ ಎಸಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99