ಪತಿ ಹೊರ ಹೋದಾಗ ಪರಪುರುಷನ ಜೊತೆ ಪತ್ನಿ ಸಲ್ಲಾಪ: ಗಂಡನಿಗೆ ವಿಷಯ ತಿಳಿದಾಗ ನಡೆದದ್ದು ದುರಂತ ಕಥೆ- ಅಲ್ಲೊಂದು ಮುತ್ತಿನ ಕಥೆಯು ಇದೆ
Thursday, May 20, 2021
ಗುಂಡ್ಲುಪೇಟೆ: ತಾನು ಇಲ್ಲದ ವೇಳೆ ತನ್ನ ಮನೆಗೆ ಬಂದು ಪತ್ನಿ ಜೊತೆ ಅಕ್ರಮ ಸಂಬಂಧ ನಡೆಸುತ್ತಿದ್ದ ವ್ಯಕ್ತಿಯನ್ನು ಪತಿಯೇ ಕೊಚ್ಚಿ ಕೊಲೆ ನಡೆಸಿರುವ ಘಟನೆ ಇಲ್ಲಿನ ಭೀಮನಬೀಡುವಿನಲ್ಲಿ ನಡೆದಿದೆ.
ಇಲ್ಲಿನ ಶಿವಣ್ಣ ಎಂಬವನ ಪತ್ನಿ ಸೌಭಾಗ್ಯ ಜೊತೆ ಅದೇ ಗ್ರಾಮದ ಬಸವಶೆಟ್ಟಿ ಎಂಬಾತ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಈ ನಿಟ್ಟಿನಲ್ಲಿ ಶಿವಣ್ಣ ಇಲ್ಲದ ವೇಳೆ ಆಗಾಗ ಮನೆಗೆ ಬಂದು ಹೋಗುತ್ತಿದ್ದ.
ಬುಧವಾರ ರಾತ್ರಿಯೂ ಬಸವಶೆಟ್ಟಿ ಶಿವಣ್ಣನ ಪತ್ನಿ ಬಳಿ ಬಂದಿದ್ದು, ಆಕೆಗೆ ಮುತ್ತಿಕ್ಕುವ ಫೋಟೋ ವನ್ನು ಕೂಡಾ ಸ್ಟೇಟಸ್‌ಗೆ ಅಪ್‌ಲೋಡ್ ಮಾಡಿದ್ದ. ವಿಚಾರ ತಿಳಿದ ಶಿವಣ್ಣ ಮನೆಗೆ ಬಂದವನೇ ಕೈಗೆ ಸಿಕ್ಕ ದೊಣ್ಣೆ, ಕಲ್ಲು ಕತ್ತಿಗಳಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿದ್ದ ಬಸವಶೆಟ್ಟಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ರಸ್ತೆ ಮಧ್ಯೆ ಮೃತಪಟ್ಟಿದ್ದಾನೆ
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.