ಕದ್ದು ಮುಚ್ಚಿ ಯುವತಿಯ ವಿಡಿಯೋ ಚಿತ್ರಿಕರಣ- ಗಮನಕ್ಕೆ ಬಂದ ಕೂಡಲೇ ಆಕೆ ಮಾಡಿದ್ದು ಹೀಗೆ....
Thursday, May 20, 2021
ಕೆಲವರಿಗೆ ಮೊಬೈಲ್ ಕ್ಯಾಮೆರಾದಲ್ಲಿ ಯುವತಿಯರ ವಿಡಿಯೋ, ಪೊಟೋ ಸೆರೆ ಹಿಡಿಯುವ ಹುಚ್ಚು ಖಯಾಲಿ ಇರುತ್ತದೆ. ಈ ರೀತಿ ಮಾಡಿ ವಿಕೃತ ಆನಂದ ಅನುಭವಿಸುತ್ತಿದ್ದ ವ್ಯಕ್ತಿ ಗೆ ಯುವತಿಯೊಬ್ಬಳು ಸಾರ್ವಜನಿಕ ಸ್ಥಳದಲ್ಲೇ ಚಪ್ಪಲಿಯಿಂದ ಥಳಿಸಿದ ಘಟನೆ ಜೈಪುರದ ಮಾನಸರೋವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿಯೊಬ್ಬಳು ಮನೆಯಿಂದ ಹೊರ ಬಂದ ಬಳಿಕ ಸಂಬಂಧಿಕರೊಬ್ಬರ ಮನೆಯ ಮುಂದೆ ನಿಂತಿದ್ದಳು. ಆಕೆ ಅಲ್ಲಿ ನಿಂತಿದ್ದ ವೇಳೆ ಆಕೆಯ ಮನೆಯ ಎದುರಿನ ಮನೆ ಜಗಲಿಯಲ್ಲಿ ವಕೀಲನೊಬ್ಬ ಕುಳಿತುಕೊಂಡು ತನ್ನ ಮೊಬೈಲ್ ಕ್ಯಾಮೆರಾ ಮೂಲಕ ವಿಡಿಯೋ ಮಾಡಲು ಆರಂಭಿಸಿದ್ದಾನೆ.
ಈತ ತನ್ನ ವಿಡಿಯೋ ಚಿತ್ರಿಕರಣ ಮಾಡುವುದನ್ನು ಗಮನಿಸಿದ ಯುವತಿ ಕೂಡಲೇ ಆತನ ಬಳಿ ಹೋಗಿದ್ದಾಳೆ. ತಾನು ಧರಿಸಿದ್ದ ಚಪ್ಪಲಿಯನ್ನು ತೆಗೆದು ಆತನಿಗೆ ಸರಿಯಾಗಿ ಪೆಟ್ಟು ನೀಡಿದ್ದಾಳೆ. ರಸ್ತೆಯಲ್ಲಿ ನಿಂತಿರುವಾಗ ಈ ವ್ಯಕ್ತಿ ತನ್ನ ವಿಡಿಯೋ ಶೂಟಿಂಗ್ ಕದ್ದು ಮುಚ್ಚಿ ಮಾಡುತ್ತಿದ್ದನೆಂದು ಆತನ ವಿರುದ್ಧ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.