ಡಬ್ಬದೊಳಗೆ ಸಿಲುಕಿದ ನಾಯಿಯ ತಲೆ: ಈ ಮುಸ್ಲಿಂ ಬಾಲಕರು ಮಾಡಿದ್ದೇನು ಗೊತ್ತಾ?ವೀಡಿಯೋ ನೋಡಿ
Thursday, May 20, 2021
ಮಂಜೇಶ್ವರ: ಇಲ್ಲಿನ ವರ್ಕಾಡಿ ಸಮೀಪ ಡಬ್ಬಿಯೊಳಗೆ ನಾಯಿಯ ತಲೆ ಸಿಲುಕಿದ್ದು, ತಲೆ ಹೊರತೆಗೆಯಲಾಗದೇ ಅತಂತ್ರ ಸ್ಥಿತಿಯಲ್ಲಿ ಇದ್ದು, ಯಾರಾದರೂ ಇದನ್ನು ತೆಗೆಯಲು ಪ್ರಯತ್ನಿಸಿದರೆ ಹೆದರಿ ನಾಯಿ ದೂರ ಓಡುತ್ತಿತ್ತು.
ಕೆಲ ದಿನಗಳಿಂದ ನಾಯಿ ಅನ್ನ ಆಹಾರ ಇಲ್ಲದೇ ತಿರುಗಾಡುತ್ತಿತ್ತು. ಇದನ್ನು ಗಮನಿಸಿದ ಮುಸ್ಲಿಂ ಬಾಲಕರ ಗುಂಪೊಂದು ಸಣ್ಣ ಹಗ್ಗಕ್ಕೆ ಉರುಳು ಹಾಕಿ ನಾಯಿಯ ತಲೆಯಲ್ಲಿ ಸಿಲುಕಿದ ಡಬ್ಬಕ್ಕೆ ಎಸೆದಿದ್ದಾರೆ. ಉರಳು ಡಬ್ಬದಲ್ಲಿ ಗಟ್ಟಿಯಾಗಿದ್ದು, ಬಳಿಕ ಈ ಬಾಲಕರು ಅದನ್ನು ಎಳೆದು ನಾಯಿಯನ್ನು ಡಬ್ಬದಿಂದ ಮುಕ್ತಿಗೊಳಿಸಿದ್ದಾರೆ.
ಇದೀಗ ಈ ಬಾಲಕರ ವೀಡಿಯೋ ವೈರಲ್ ಆಗಿದ್ದು, ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.