ಕೊರೋನಾ ನಡುವೆ ಮತ್ತೆ ಸದ್ದಿಲ್ಲದೇ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ-ಮುಂಬೈನಲ್ಲಿ100ರ ಸನಿಹ ತಲುಪಿದ ಪೆಟ್ರೋಲ್ ದರ
Friday, May 21, 2021
ನವದೆಹಲಿ: ದೇಶದ ಜನತೆ ಕೊರೋನಾ, ಲಾಕ್‌ಡೌನ್ ನಿಂದ ಹೈರಾಣಾಗಿರುವ ನಡುವೆಯೇ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡಿದೆ.
ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಕ್ರಮವಾಗಿ 19 ಪೈಸೆ ಮತ್ತು 29 ಪೈಸೆ ಹೆಚ್ಚಳವಾಗಿದ್ದು, ಪೆಟ್ರೋಲ್ ದರ ಲೀಟರ್‌ಗೆ 93.04 ರೂ ಆದರೆ ಡೀಸೆಲ್‌ಗೆ 83. 80 ರೂ. ಆಗಿದೆ.
ಇನ್ನುಳಿದಂತೆ ಮುಂಬೈಯಲ್ಲಿ ಪೆಟ್ರೋಲ್ ದರ 99.32, ಡೀಸೆಲ್ 91.01 ರೂ.ಗೆ ಹೆಚ್ಚಳವಾಗಿದೆ.
ಚೆನ್ನೈ ಯಲ್ಲಿ ಪೆಟ್ರೋಲ್ ದರ 94.71 ಡೀಸೆಲ್ 88.62 ರೂ.ಗೆ ಏರಿಕೆಯಾಗಿದೆ.
ಅದೇ ರೀತಿ ಕೊಲ್ಕತ್ತಾ ದಲ್ಲಿ ಪೆಟ್ರೋಲ್ ದರ 93.11 ಡೀಸೆಲ್ 86.64 ರೂ.ಗೆ
ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 96.14 ರೂಪಾಯಿ ಆದರೆ, ಡೀಸೆಲ್ ಬೆಲೆ 88.84 ರೂಪಾಯಿ ತಲುಪಿದೆ.