ನಾಳೆ ( ಮೇ 22) ಯಿಂದ 18-44 ವಯಸ್ಸಿನವರಿಗೆ ಕೊರೊನಾ ಲಸಿಕೆ- ಉಪಮುಖ್ಯಮಂತ್ರಿ
Friday, May 21, 2021
ಬೆಂಗಳೂರು; ನಾಳೆಯಿಂದ ( ಮೇ 22)
ಕೊರೊನಾ ನಿರೋಧಕ ಲಸಿಕೆಯನ್ನು 18-44ರ ವಯಸ್ಸಿನವರಿಗೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ 1.90 ಲಕ್ಷ ಜನರಿಗೆ ಬಾಕಿಯಿದೆ. ಆ ಲಸಿಕೆಯ ಲಭ್ಯತೆ ಅನುಸಾರ ಜನರಿಗೆ ವಿತರಿಸಲಾಗುವುದು ಎಂದರು.
Black Fungus ಕಾಯಿಲೆಗೆ ಮೊದಲಿನಿಂದಲೂ ಅಗತ್ಯ ಚಿಕಿತ್ಸಾ ವಿಧಾನ ಹಾಗೂ ಔಷಧಿಗಳು ಲಭ್ಯವಿವೆ. ಕೋವಿಡ್ ಸಂಬಂಧಿತ Mucormycosis ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಚಿಕಿತ್ಸೆಗೆ ಯಾವುದೇ ಅಡ್ಡಿಯಿಲ್ಲ .Remdesivir, LiposomalAmphotericinB ಸೇರಿದಂತೆ ಔಷಧಿಗಳ ಪೂರೈಕೆ ಹಾಗೂ ಲಭ್ಯತೆ ವಿಚಾರದಲ್ಲಿ ಕೇಂದ್ರ-ರಾಜ್ಯ ಸರ್ಕಾರ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿವೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.