
ತನ್ನ ಚೆಲುವು ತೋರಿಸಲು ಬಿದ್ದ ಮರದ ಎದುರು ಪೊಟೋ ಶೂಟ್- ಟೀಕೆಗೆ ಈ ನಟಿ ಹೇಳಿದ್ದು ಹೀಗೆ... (Photos and video)
ಇತ್ತೀಚೆಗೆ ನಟಿ ದೀಪಿಕಾ ಸಿಂಗ್ Instagram ನಲ್ಲಿ ಹಾಕಿದ ಪೊಟೋ ವೊಂದು ಭಾರಿ ಟೀಕೆಗೆ ಗುರಿಯಾಗಿತ್ತು. ತೌಕ್ತೆ ಚಂಡಮಾರುತದ ವೇಳೆ ಬಿದ್ದ ಮರವೊಂದರ ಎದುರು ನಿಂತು ಪೊಟೋ ಶೂಟ್ ಮಾಡಿದ್ದ ದೀಪಿಕಾ ಸಿಂಗ್ ಇದನ್ನು ಜಾಲತಾಣದಲ್ಲಿ ಹಂಚಿದ್ದರು. ಧಾರಾಕಾರ ಮಳೆಯ ಮಧ್ಯೆ ಫೋಟೊ ಶೂಟ್ ಮಾಡಿದ್ದ ಈಕೆಯ ಪೊಟೋ ಗೆ ಟೀಕೆಗಳು ವ್ಯಕ್ತವಾಗಿದ್ದವು.
ಈ ಟೀಕೆಗೆ ಉತ್ತರಿಸಿದ ಅವರು ಯಾವ ಪೊಟೋ ಹಾಕಿದರೂ ಅದಕ್ಕೆ ಪಾಸಿಟಿವ್ ನೆಗೆಟಿವ್ ಪ್ರತಿಕ್ರಿಯೆ ಗಳು ಇದ್ದದ್ದೇ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಬಿದ್ದ ಮರವನ್ನು ನಮ್ಮ ಮನೆಯ ಮುಂದೆ,ನಾನೇ ನೆಟ್ಟಿದ್ದೆ.ಗಾಳಿಗೆ ಬಿದ್ದಿರುವ ಅದನ್ನು ರಸ್ತೆಗೆ ಅಡ್ಡಿಯಾಗಬಾರದು ಎಂದು ಮನೆಯ ಬಳಿ ತಂದು ಹಾಕಿದ್ವಿ. ನಮ್ಮಲ್ಲಿ ಅಷ್ಟೇನೂ ಮಳೆಯಾಗಿಲ್ಲ. 5 ನಿಮಿಷ ಹೊರಬಂದು ಮಳೆಯಲ್ಲಿ ನೆನೆದು ಪ್ರಕೃತಿ ಅಪ್ಪಿಕೊಂಡಿದ್ದೇನೆ ’ ಎಂದಿದ್ದಾರೆ.