
ಅಂದು ಪತ್ರಕರ್ತೆ, ಇಂದು ಆರೋಗ್ಯ ಸಚಿವೆ- ಶೈಲಜಾ ಟೀಚರ್ ಸ್ಥಾನ ತುಂಬುವರೇ ವೀಣಾ ಜಾರ್ಜ್?
Friday, May 21, 2021
ತಿರುವನಂತಪುರಂ: ಎಲ್ಲಾ ಹೊಸ ಮುಖಗಳನ್ನೇ ಹೊತ್ತುಕೊಂಡು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊಸ ಮಂತ್ರಿ ಮಂಡಲ ರಚಿಸಿದ್ದಾರೆ.
ಆದರೆ ಕಳೆದ ಅವಧಿಯಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಬಹಳಷ್ಟು ಹೆಸರು ಮಾಡಿದ್ದ ಅಂದಿನ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರನ್ನೂ ಸಂಪುಟದಿಂದ ಕೈ ಬಿಡಲಾಗಿದ್ದು, ಇದೀಗ ನೂತನ ಆರೋಗ್ಯ ಸಚಿವರಾಗಿ ಮಾಜಿ ಪತ್ರಕರ್ತೆ ವೀಣಾ ಜಾರ್ಜ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿದ್ದ ವೀಣಾ ಜಾರ್ಜ್ ಇದು ಎರಡನೇ ಅವಧಿಯ ಶಾಸಕರು. ಫಿಸಿಕ್ಸ್‌ನಲ್ಲಿ ಎಂಎಸ್ಸಿ ಮುಗಿಸಿದ್ದ ವೀಣಾ ಬಳಿಕ ಮಾಧ್ಯಮ ರಂಗದಲ್ಲಿ ತನ್ನ ವೃತ್ತಿ ಜೀವನ ಪ್ರಾರಂಭಿಸಿದ್ದರು. ಆರಾನ್ಮುಳ ಕ್ಷೇತ್ರದಿಂದ 2016ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ವೀಣಾ ಈ ಬಾರಿಯೂ ಅದೇ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದಾರೆ.
ಎಸ್ಎಫ್‌ಐ ಮೂಲಕ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯಕ್ಕೆ ಧುಮುಕಿದ್ದ ವೀಣಾ ಸಿಪಿಐಎಂನಲ್ಲಿ ಗುರುತಿಸಿಕೊಂಡಿದ್ದರು.