ಮೂಡಬಿದಿರೆ: ನನ್ನ ಓಟು ನರೇಂದ್ರ ಮೋದಿಗೆ ಎಂದಿದ್ದ ಈ ಜವಳಿ ವ್ಯಾಪಾರಿ ಈಗ ಹೇಳುವುದು ಏನು ಗೊತ್ತಾ: ನೋಟ್ ಬ್ಯಾನ್, ಜಿಎಸ್‌ಟಿ, ಲಾಕ್‌ಡೌನ್ ನಿಂದ ದೇಶಕ್ಕಾದ ನಷ್ಟ ತಿಳಿಯಲು ಅವರ ಈ ವೀಡಿಯೋ ನೋಡಿ
Friday, May 21, 2021
ಮೂಡುಬಿದಿರೆ: ಸರಕಾರ ವಿಧಿಸಿರುವ ಲಾಕ್‌ಡೌನ್ ಸಂಪೂರ್ಣ ಪಕ್ಷಪಾತಿಯಾಗಿದ್ದು, ಸರಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದ್ದೆ ಎಂದು ಮೂಡಬಿದ್ರೆಯ ಜವಳಿ ವ್ಯಾಪಾರಿಯೋರ್ವರು ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಬಿದಿರೆಯಲ್ಲಿ ಜವಳಿ ಉದ್ಯಮ ನಡೆಸುತ್ತಿರುವ ಸದಾಶಿವ ರಾವ್ ನೆಲ್ಲಿಮಾರ್ ಎಂಬವರು ಸರಕಾರ ಕೇವಲ ದಿನಸಿ, ತರಕಾರಿ, ಬೇಕರಿ ಮತ್ತು ಮೆಡಿಕಲ್ ವ್ಯಾಪಾರಸ್ಥರಿಗೆ ವ್ಯಾಪರಕ್ಕೆ ಅನುಮತಿಸಿರುವುದನ್ನು ಖಂಡಿಸಿದ್ದು, ಜವಳಿ ಸಹಿತ ಇತ ವ್ಯಾಪಾರಸ್ಥರಿಗೂ ವಾರದಲ್ಲಿ ಕೆಲವು ದಿನಗಳಾದರೂ ವ್ಯಾಪಾರಕ್ಕೆ ಅನುಮತಿ ನೀಡಿ ಎಂದು ವಿನಂತಿಸಿದ್ದಾರೆ.
ನೋಟು ನಿಷೇಧ, ಜಿಎಸ್‌ಟಿ ಮತ್ತು ಕಳೆದ ಒಂದು ವರ್ಷದಿಂದ ಕೊರೋನಾ ಹಿನ್ನೆಲೆಯ ನಿರ್ಬಂಧ ದಿಂದಾಗಿ ಜವಳಿ ಸಹಿತ ಇತರ ವ್ಯಾಪಾರಿಗಳು ಹೈರಾಣಾಗಿದ್ದು, ಅವರ ಕಷ್ಟವನ್ನೂ ಸರಕಾರ ಅರ್ಥಮಾಡಿಕೊಳ್ಳಬೇಕಿದೆ ಎಂದಿದ್ದಾರೆ. ಅಲ್ಲದೇ ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳೂ ಕೆಲಸವಿಲ್ಲದೇ ಅತಂತ್ರ ಸ್ಥಿತಿಯಲ್ಲಿ ಇದ್ದು, ಅವರ ಜೀವನ ನಿರ್ವಹಣೆ ಹಿನ್ನೆಲೆಯಲ್ಲಿಯಾದರೂ ನಮಗೆ ಸರಕಾರ ನಮಗೆ ವ್ಯಾಪಾರಕ್ಕೆ ಅನುಮತಿ ನೀಡಬೇಕೆಂದು ವಿನಂತಿಸಿದ್ದಾರೆ.
ಇವರ ವೀಡಿಯೋ ಬೆನ್ನಲ್ಲೇ ಅವರು ಈ ಹಿಂದೆ ಕಾಂಗ್ರಸ್ ವಿರೋಧಿಸಿ, ಹಾಗೂ ಬಿಜೆಪಿ ಪರವಾಗಿ ಹಾಕಿದ್ದ ಪೋಸ್ಟ್ ವೈರಲ್ ಆಗತೊಡಗಿದ್ದೂ, ಕಟ್ಟಾ ಬಿಜೆಪಿ ಬೆಂಬಲಿಗನಿಗೂ ಬಿಜೆಪಿ ಆಡಳಿತದಲ್ಲಿ ಈ ಸ್ಥಿತಿ ಬಂತಲ್ಲಾ ಎಂದು ಜನ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡತೊಡಗಿದ್ದಾರೆ.