
ಮಹಿಳೆ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ Police Inspectorನ ....... ನ್ನೇ ಕಟ್ ಮಾಡಿದ ಹೆಚ್ಚುವರಿ ಕಮಿಷನರ್
Friday, May 21, 2021
ಮುಂಬೈ: ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ, ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರಲು ಕಾರಣರಾಗಿದ್ದಾರೆ ಎಂದು ಆರೋಪಿಸಿ ಇಲ್ಲಿನ ನಾಗಪಡ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರ ಒಂದು ವರ್ಷದವರೆಗಿನ ಇಂಕ್ರಿಮೆಂಟ್ ಅನ್ನು ಪೊಲೀಸ್ ಇಲಾಖೆ ಕಟ್ ಮಾಡಿದೆ.
ಇಲ್ಲಿನ ನಾಗಪಡ ಠಾಣೆಯಲ್ಲಿ ಅಸಿಸ್ಟೆಂಟ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಧನ್‌ರಾಜ್ ಪ್ರಭಾಲೆ ಅವರು ಅಕ್ರಮ ಸಂಬಂಧದ ಆರೋಪ ಎದುರಿಸುತ್ತಿದ್ದು, ಮುಂಬೈ ಹೆಚ್ಚುವರಿ ಪೊಲೀಸ್ ಕಮಿಷನರ್ ಧ್ಯಾನೇಶ್ವರ ಚವ್ಹಾಣ್ ಒಂದು ವರ್ಷದವರೆಗಿನ ಇಂಕ್ರಿಮೆಂಟ್ ರದ್ದು ಮಾಡುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.
ಧನ್‌ರಾಜ್ ವಿವಾಹಿತನಾಗಿದ್ದರೂ ಫೇಸ್‌ಬುಕ್ ನಲ್ಲಿ ಪರಿಚಯ ಗೊಂಡಿದ್ದ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಬಳಿಕ ಅವರಿಬ್ಬರ ಸಂಬಂಧ ಹಳಸಿದ್ದು, ಧನ್‌ಪಾಲ್ ವಿರುದ್ಧ ಮಹಿಳೆ ಮೇಲಾಧಿಕಾರಿಗಳಿಗೆ ಕಿರುಕುಳ ಆರೋಪಿಸಿ ದೂರು ನೀಡಿದ್ದಳು.
ದೂರಿನ ಹಿನ್ನೆಲೆಯಲ್ಲಿ ಇಲಾಖೆ ಆಂತರಿಕ ತನಿಖೆ ನಡೆಸಿದ್ದು, ಧನ್‌ಪಾಲ್ ಅಶಿಸ್ತಿನಿಂದ ವರ್ತಿಸಿದ್ದು, ಇಲಾಖೆಯ ಹೆಸರಿಗೆ ಧಕ್ಕೆ ತಂದಿದ್ದಾನೆ ಎಂದು ತೀರ್ಮಾನಕ್ಕೆ ಬರಲಾಗಿತ್ತು. ಈ ನಿಟ್ಟಿನಲ್ಲಿ ಅಸಿಸ್ಟೆಂಟ್ ಪೊಲೀಸ್ ಇನ್ಸ್‌ಪೆಕ್ಟರ್ ಅವರ ಒಂದು ವರ್ಷದ ಇಂಕ್ರಿಮೆಂಟ್ ಅನ್ನು ರದ್ದುಪಡಿಸಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅವರು ಆದೇಶಿಸಿದ್ದಾರೆ.