Header Ad

ಸುರತ್ಕಲ್ ನಲ್ಲಿ ಹೂವು ಖರೀದಿಗೆ ಬರುತ್ತಿದ್ದ ಯುವತಿ ಜೊತೆಗೆ ಪ್ರೀತಿ ಪ್ರೇಮ; ಒಂದು ಕೊಲೆ, ಒಂದು ಆತ್ಮಹತ್ಯೆ!


(ಗಲ್ಫ್ ಕನ್ನಡಿಗ)ಮಂಗಳೂರು; ಹೂವು ಖರೀದಿಗೆ  ಬರುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ವ್ಯಕ್ತಿ ಆಕೆಯನ್ನು ಕೊಂದು ತಾನು ನೇಣು ಬಿಗಿದು ಸಾವನ್ನಪ್ಪಿದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

(ಗಲ್ಫ್ ಕನ್ನಡಿಗ)ಸುರತ್ಕಲ್ ಕುಳಾಯಿ ನಿವಾಸಿ ವಸಂತ್ ( 44 )  ಹೂವು ಮಾರಾಟ ಮಾಡುತ್ತಿದ್ದು ಈತ  ಹೂವು ಖರೀದಿಗೆ ಬರುತ್ತಿದ್ದ. ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದ. ಇಂದು  ಯಾವುದೋ ವೈಮನಸ್ಸಿನಿಂದ ಆಕೆಯನ್ನು ಕೊಂದಿದ್ದಾನೆ. ಬಳಿಕ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಗಲ್ಫ್ ಕನ್ನಡಿಗ)
ಇತ್ತೀಚಿನ ಸುದ್ದಿಗಳು