ಯುವತಿಯೊಂದಿಗೆ ಅನೈತಿಕ ಸಂಬಂದ: ಪ್ರೀತಿಸಿ ಮದುವೆಯಾದ ಪತ್ನಿಯನ್ನು ಹತ್ಯೆ ಮಾಡಿದ ಪತಿ! (video)
(ಗಲ್ಪ್ ಕನ್ನಡಿಗ)ಹಾಸನ: ಪ್ರೀತಿಸಿ ಮದುವೆಯಾದ ಪತ್ನಿಯನ್ನೆ ಪ್ರಿಯತಮೆಯ ಜೊತೆಗೆ ಸೇರಿ ಹತ್ಯೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.
(ಗಲ್ಪ್ ಕನ್ನಡಿಗ)ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮದ ಸುಷ್ಮಿತಾ ಕೊಲೆಯಾದವರು. ಈಕೆಯನ್ನು ಬೆಲಗೂರು ಗ್ರಾಮದ ನಾಗರಾಜ್ ಆರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದನು. ನಾಗರಾಜ್ ಮದುವೆಯಾಗಿದ್ದರು ಶೈಲಾ ಎಂಬವಳ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದನು. ಇದೇ ವಿಚಾರದಲ್ಲಿ ಪತಿ ಪತ್ನಿಯರ ನಡುವೆ ಗಲಾಟೆ ನಡೆಯುತ್ತಿತ್ತು. ಅನೈತಿಕ ಸಂಬಂಧದಿಂದ ದೂರವಾಗದ ನಾಗರಾಜ್ ನನ್ನು ಬಿಟ್ಟು ಸುಷ್ಮಿತಾ ತವರು ಮನೆಗೆ ಹೋಗಿ ವಿಚ್ಚೇದನಕ್ಕೆ ಅರ್ಜಿ ಹಾಕಿ ಜೀವನಾಂಶ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಳು.
(ಗಲ್ಪ್ ಕನ್ನಡಿಗ)ನಾಗರಾಜ್ ಇದಕ್ಕಾಗಿ ಆಕೆಯ ಕೊಲೆ ಮಾಡುವ ಸ್ಕೆಚ್ ಮಾಡಿದ್ದಾನೆ. ಪ್ರಿಯತಮೆ ಶೈಲ ಮತ್ತು ಸಹೋದರ ಮೋಹನ್ ಎಂಬಾತನ ಜೊತೆಗೆ ಸೇರಿ ಕೊಲೆಯ ಸ್ಕೆಚ್ ಮಾಡಿದ ಅವರು ರಾಜೀ ಸಂಧಾನದ ಮಾತುಕತೆಗೆ ಎಂದು ಪತ್ನಿಯನ್ನು ಕರೆಸಿಕೊಂಡಿದ್ದನು. ಪೊಲಿಸರಿಗೆ ಸಿಕ್ಕಿ ಹಾಕಿಕೊಳ್ಳಬಾರದೆಂದು ಶವವನ್ನು ಹಾಸನಕ್ಕೆ ತಮದು ಕೆರೆಯಲ್ಲಿ ಬಿಸಾಡಿದ್ದಾರೆ. ಅಪರಿಚಿತ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
(ಗಲ್ಪ್ ಕನ್ನಡಿಗ)