ಕೊರೊನಾ ಪ್ರಮಾಣಪತ್ರ ಇಲ್ಲದಿದ್ದರೆ ಕಾಲೇಜುಗಳಿಗೆ ಪ್ರವೇಶವಿಲ್ಲ!





(ಗಲ್ಫ್ ಕನ್ನಡಿಗ)ಮಂಗಳೂರು;ನವಂಬರ್ 17ರಿಂದ ಪದವಿ ಕಾಲೇಜುಗಳು ಪ್ರಾರಂಭವಾಗಲಿದ್ದು ಕೊರೊನಾ ಪ್ರಮಾಣಪತ್ರ  ಇಲ್ಲದಿದ್ದರೆ ಕಾಲೇಜುಗಳಿಗೆ ಪ್ರವೇಶವಿಲ್ಲ ಎಂದು ದ.ಕ ಜಿಲ್ಲಾಡಳಿತ ಪ್ರಕಟನೆ ತಿಳಿಸಿದೆ.

(ಗಲ್ಫ್ ಕನ್ನಡಿಗ)ಕಾಲೇಜಿಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಕೊರೊನಾ ಟೆಸ್ಟನ್ನು ಮಾಡಿಸಿಕೊಂಡು  ಪ್ರಮಾಣ ಪತ್ರದೊಂದಿಗೆ ಹಾಜರಾಗಬೇಕು. ವಿದ್ಯಾರ್ಥಿಗಳು ಕೊರೊನಾ ಟೆಸ್ಟನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ  ,ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದಾಗಿದೆ.

(ಗಲ್ಫ್ ಕನ್ನಡಿಗ)ಈಗಾಗಲೇ ಕೊರೊನಾ ಟೆಸ್ಟ್ನ ಮ್ಯಾಪಿಂಗ್  ಕಾಲೇಜುಗಳು ಲಿಂಕ್ ಮಾಡಲಾಗಿದೆ .ಕೊರೊನಾ ಪರೀಕ್ಷೆ ಪ್ರಮಾಣಪತ್ರ ಹೊಂದದೇ ಇರುವ ವಿದ್ಯಾರ್ಥಿಗಳಿಗೆ ಪ್ರವೇಶವಿರುವುದಿಲ್ಲ ಎಂದು  ತಿಳಿಸಲಾಗಿದೆ.

(ಗಲ್ಫ್ ಕನ್ನಡಿಗ)