-->
ads hereindex.jpg
ಶ್ರೀರಾಮುಲು ತಾಯಿ ಅಂತಿಮ ವಿಧಿಯಲ್ಲಿ ಭಾಗಿ: ಬಳ್ಳಾರಿಗೆ ಎಂಟ್ರಿ ಕೊಡಲಿರುವ ಗಾಲಿ ಜನಾರ್ದನ ರೆಡ್ಡಿ

ಶ್ರೀರಾಮುಲು ತಾಯಿ ಅಂತಿಮ ವಿಧಿಯಲ್ಲಿ ಭಾಗಿ: ಬಳ್ಳಾರಿಗೆ ಎಂಟ್ರಿ ಕೊಡಲಿರುವ ಗಾಲಿ ಜನಾರ್ದನ ರೆಡ್ಡಿ


(ಗಲ್ಫ್ ಕನ್ನಡಿಗ)ನವದೆಹಲಿ: ಒಂದು ಕಾಲದಲ್ಲಿ ಬಳ್ಳಾರಿಯ ಅನಭಿಷಿಕ್ತ ದೊರೆಯಂತೆ ಮೆರೆದಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇಂದು ಅದೇ ಜಿಲ್ಲೆಗೆ ಕಾಲಿಡಲು ಸುಪ್ರೀಂ ಕೋರ್ಟ್ ಅನುಮತಿ ಪಡೆದುಕೊಂಡಿದ್ದಾರೆ. ಷರತ್ತಿನ ಮೇಲೆ ಎರಡು ದಿನಗಳ ಕಾಲ ಪೊಲೀಸ್ ಭದ್ರತೆಯೊಂದಿಗೆ ಜಿಲ್ಲೆಗೆ ಹೋಗಿ ಬರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

(ಗಲ್ಫ್ ಕನ್ನಡಿಗ)ಈ ಹಿನ್ನೆಲೆಯಲ್ಲಿ, ಆರೋಗ್ಯ ಸಚಿವ ಶ್ರೀರಾಮುಲು ಅವರ ತಾಯಿಯ ಕೊನೆಯ ವಿಧಿಗಳ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ಧಾರೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ಅವರ ಪೀಠ ಎರಡು ದಿನಗಳ ಕಾಲ ಪೊಲೀಸ್ ರಕ್ಷಣೆಯಲ್ಲಿ ಬಳ್ಳಾರಿಗೆ ಭೇಟಿ ನೀಡಲು ಜನಾರ್ಧನ ರೆಡ್ಡಿ ಅವರಿಗೆ ಅನುಮತಿಸಿದೆ. ಆದರೆ ಹಾಗೆ ಭೇಟಿ ನೀಡಿದ ಸಮಯದಲ್ಲಿ ಅವರು ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ಮಧ್ಯಂತರ ತೀರ್ಪಿನಲ್ಲಿ ನ್ಯಾಯಪೀಠ ಆದೇಶ ನೀಡಿದೆ.

(ಗಲ್ಫ್ ಕನ್ನಡಿಗ)ಅರ್ಜಿದಾರರ ನಿಕಟವರ್ತಿಯ ತಾಯಿಯ ಅಂತಿಮ ವಿಧಿ ಕಾರ್ಯಕ್ಕೆ ಸಂಬಂಧಿಸಿದಂತೆ, ಅವರು ಎರಡು ದಿನಗಳ ಕಾಲ ಬಳ್ಳಾರಿಗೆ ಭೇಟಿ ನೀಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಅವರಿಗೆ ಎರಡು ದಿನಗಳ ಕಾಲ ಭೇಟಿ ನೀಡಲು ಅನುಮತಿಯನ್ನು ನ್ಯಾಯಾಲಯ ನೀಡಿದೆ. ಅದೂ ಸಹ ಪೊಲೀಸರ ಭದ್ರತೆಯ ಅಡಿಯಲ್ಲಿ ಬರಲಿದ್ದು ಅವರು ಬಳ್ಳಾರಿಗೆ ಭೇಟಿ ನೀಡಿದಾಗ ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ಸೂಚಿಸಲಾಗಿದೆ

(ಗಲ್ಫ್ ಕನ್ನಡಿಗ)ಕಳೆದ ಬಾರಿ ಮೇ 4 ರಂದು ನಾರ್ಧನ ರೆಡ್ಡಿ ಅವರಿಗೆ ಬಳ್ಳಾರಿಗೆ ಭೇಟಿ ಕೊಡಲು ಮತ್ತು ಅವರ ಸಹೋದರ ಸೋಮಸೇಖರ ರೆಡ್ಡಿ ಅವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣೆಯಲ್ಲಿ ಮತ ಚಲಾಯಿಸಲು ಸರ್ವೋಚ್ಚ ನ್ಯಾಯಾಲಯವು ಅನುಮತಿ ನೀಡಿರಲಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಜನಾರ್ಧನ ರೆಡ್ಡಿ ಜಾಮೀನಿನ ಮೇಲೆ ಹೊರಗಿದ್ದಾರೆ. ನ್ಯಾಯಾಲಯದ ಅನುಮತಿಯಿಲ್ಲದೆ ಅವರಿಗೆ ಬಳ್ಳಾರಿಗೆ ಭೇಟಿನೀಡಲು ಸಾಧ್ಯವಾಗುವುದಿಲ್ಲ ಎಂಬುದು ಅವರ ಜಾಮೀನು ಷರತ್ತುಗಳಲ್ಲಿ ಒಂದಾಗಿದೆ.

(ಗಲ್ಫ್ ಕನ್ನಡಿಗ)ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಜನಾರಾಧನ ರೆಡ್ಡಿ ಅವರನ್ನು ಎರಡು ಬಾರಿ ಅಕ್ರಮ ಗಣಿಗಾರಿಕೆ ಆರೋಪದಡಿ ಬಂಧಿಸಲಾಯಿತು - 2011 ರಲ್ಲಿ ಒಮ್ಮೆ ಮತ್ತು ರ 2015 ರಲ್ಲಿ. ಅವರಿಗೆ 2015 ರಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ಬರೋಬ್ಬರಿ ಒಂದೂವರೆ ವರ್ಷದ ನಂತರ ಬಳ್ಳಾರಿಗೆ ಆಗಮಿಸುತ್ತಿರುವ ಜನಾರ್ಧನ ರೆಡ್ಡಿ ಅವರಿಗಾಗಿ ಬಳ್ಳಾರಿಯಲ್ಲಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Ads on article

Advertise in articles 1

advertising articles 2

IMG_20220827_133242

Advertise under the article

IMG-20220907-WA0033 IMG_20220827_133242