-->
ads hereindex.jpg
ಬಿಜೆಪಿ ನೂತನ ರಾಜ್ಯ ಪದಾಧಿಕಾರಿಗಳ ಆಯ್ಕೆ; ಯಡಿಯೂರಪ್ಪ ಪುತ್ರನಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ

ಬಿಜೆಪಿ ನೂತನ ರಾಜ್ಯ ಪದಾಧಿಕಾರಿಗಳ ಆಯ್ಕೆ; ಯಡಿಯೂರಪ್ಪ ಪುತ್ರನಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ


(ಗಲ್ಫ್ ಕನ್ನಡಿಗ) ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ  ಬಿವೈ ವಿಜಯೇಂದ್ರ ಅವರು ನೇಮಕವಾಗಿದ್ದಾರೆ.

 ರಾಜ್ಯ ಬಿಜೆಪಿ ಘಟಕದ ನೂತನ ಪದಾಧಿಕಾರಿಗಳನ್ನು ಇಂದು  ನೇಮಕ ಮಾಡಲಾಗಿದ್ದು  ಅದರ ಪಟ್ಟಿ ಈ ಕೆಳಗಿನಂತಿದೆ.


ರಾಜ್ಯ ಉಪಾಧ್ಯಕ್ಷರುಗಳು

(ಗಲ್ಫ್ ಕನ್ನಡಿಗ)ರಾಜ್ಯ ಉಪಾಧ್ಯಕ್ಷರಾಗಿ, ಬಿವೈ ವಿಜಯೇಂದ್ರ  ಅರವಿಂದ ಲಿಂಬಾವಳಿ, ನಿರ್ಮಲ್ ಕುಮರ್ ಸುರಾನಾ, ಶೋಭಾ ಕರಂದ್ಲಾಜೆ, ಮಾಲೀಕಯ್ಯ ಗುತ್ತೇದಾರ್, ತೇಜಸ್ವಿನಿ ಅನಂತಕುಮಾರ್, ಪ್ರತಾಪ ಸಿಂಹ, ಎಂ.ಬಿ. ನಂದೀಶ್, ಎಂ. ಶಂಕರಪ್ಪ, ಎಂ. ರಾಜೇಂದ್ರ ಅವರನ್ನು ನೇಮಿಸಲಾಗಿದೆ.

ರಾಜ್ಯ ಪ್ರಧಾನ ಕಾರ್ಯದರ್ಶಿಗಳು

(ಗಲ್ಫ್ ಕನ್ನಡಿಗ)ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಎನ್. ರವಿಕುಮಾರ್, ಸಿದ್ದರಾಜು, ಅಶ್ವಥ್ ನಾರಾಯಣ, ಮಹೇಶ್ ತೆಂಗಿನಕಾಯಿ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಕಾರ್ಯದರ್ಶಿಗಳು:

(ಗಲ್ಫ್ ಕನ್ನಡಿಗ)ರಾಜ್ಯ ಕಾರ್ಯದರ್ಶಿಗಳಾಗಿ ಸತೀಶ್ ರೆಡ್ಡಿ, ತುಳಸಿ ಮುನಿರಾಜು ಗೌಡ, ಎಸ್ ರನ್ನು ನೇಮಕ ಮಾಡಲಾಗಿದೆ.


ರಾಜ್ಯ ಖಜಾಂಚಿಗಳು

(ಗಲ್ಫ್ ಕನ್ನಡಿಗ)ರಾಜ್ಯ ಖಜಾಂಚಿಗಳಾಗಿ ಸುಬ್ಬ ನರಸಿಂಹ, ಲೆಹರ್ ಸಿಂಗ್ ಸಿರೋಯಾ ಅವರನ್ನು ನೇಮಕ ಮಾಡಲಾಗಿದೆ.

ಮೋರ್ಚಾ ರಾಜ್ಯ ಅಧ್ಯಕ್ಷರು:

(ಗಲ್ಫ್ ಕನ್ನಡಿಗ)ಯುವ ಮೋರ್ಚಾ ಅಧ್ಯಕ್ಷರಾಗಿ ಡಾ. ಸಂದೀಪ್, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಗೀತಾ ವಿವೇಕಾನಂದ, ರೈತ ಮೋರ್ಚಾ ಅಧ್ಯಕ್ಷರಾಗಿ ಈರಣ್ಣ ಕಡಾಡಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಅಶೋಕ ಗಸ್ತಿ, ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿ ಚಲವಾದಿ ನಾರಾಯಣಸ್ವಾಮಿ, ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ತಿಪ್ಪರಾಜು ಹವಾಲ್ದಾರ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಮುಜಮಿಲ್ ಬಾಬು ಅವರನ್ನು ನೇಮಕ ಮಾಡಲಾಗಿದೆ.

(ಗಲ್ಫ್ ಕನ್ನಡಿಗ) ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೇಕಲ್ಲು, ರಾಜ್ಯ ವಕ್ತಾರರಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರನ್ನು ನೇಮಕ ಮಾಡಲಾಗಿದೆ. 

ಪ್ರಕೋಷ್ಟಗಳ ಸಂಯೋಜಕರಾಗಿ ಎಂ.ಬಿ. ಭಾನುಪ್ರಕಾಶ್, ಡಾ.ಎ.ಹೆಚ್. ಶಿವಯೋಗಿಸ್ವಾಮಿ ಅವರನ್ನು  ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.

Ads on article

Advertise in articles 1

advertising articles 2