ಫಸ್ಟ್ ಮೊಲೆನ್ ಕರ್ತ ಕೆರೊಡ್ ಎಂದವ ಪೊಲೀಸ್ ಬಲೆಗೆ : ಡಿಸಿಗೆ ಜೀವ ಬೆದರಿಕೆಯೊಡ್ಡಿದವರ ಕೊನೆಗೂ ಅರೆಸ್ಟ್
(ಗಲ್ಪ್ ಕನ್ನಡಿಗ)ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರಿಗೆ ವಾಟ್ಸಪ್ ನಲ್ಲಿ ಜೀವ ಬೆದರಿಕೆಯೊಡ್ಡಿದ ವ್ಯಕ್ತಿಯನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.
(ಗಲ್ಪ್ ಕನ್ನಡಿಗ)ಗೋ ಸಾಗಾಟದ ವಿಚಾರದಲ್ಲಿ ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ಕಾನೂನು ಕೈಗೆತ್ತಿಕೊಂಡರೆ ಕ್ರಮ ಎಂಬ ಹೇಳಿಕೆಯ ನಂತರ ಅವರಿಗೆ ವಾಟ್ಸಪ್ ನಲ್ಲಿ ಜೀವಬೆದರಿಕೆಯೊಡ್ಡುವ ಘಟನೆ ನಡೆದಿತ್ತು. ಮೂಡಬಿದ್ರೆಯ ತೆಂಕಮಿಜಾರಿನ ರಂಜಿತ್ ಎಂಬಾತ ಜಿಲ್ಲಾಧಿಕಾರಿಗೆ ಫಸ್ಟ್ ಮೊಲೆನ್ ಕರ್ತ್ ಕೆರೊಡ್ ( ಮೊದಲು ಇವಳನ್ನು ಕಡಿದು ಕೊಲ್ಲಬೇಕು) ಎಂದು ಬರೆದುಕೊಂಡಿದ್ದ. ಇದರ ವಿರುದ್ದ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ) ವಾಟ್ಸಪ್ ನಲ್ಲಿದ್ದ ಆತನ ಮೊಬೈಲ್ ನಂಬರ್ ಆಧಾರದಲ್ಲಿ ಆತನನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿದ್ದಾರೆ. ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಲಾಗಿದೆ.
ಇದನ್ನು ಓದಿ
ಗೋ ಸಾಗಾಟ ವಿವಾದದ ಬೆನ್ನಿಗೆ ದ.ಕ ಜಿಲ್ಲಾಧಿಕಾರಿ ವರ್ಗಾವಣೆ: ವರ್ಗಾವಣೆಗೆ ಇದೇ ಕಾರಣವಾಯ್ತ?