ಮಂಗಳೂರಿನಲ್ಲಿ ಬಾತ್ ರೂಂ ಗೆ ಸ್ನಾನಕ್ಕೆ ಹೋದ 20 ವರ್ಷದ ಯುವತಿ ನಾಪತ್ತೆ: ಇದು ಈಕೆಯದು ಸೆಕೆಂಡ್ ಎಸ್ಕೇಪ್
Friday, July 31, 2020
(ಗಲ್ಪ್ ಕನ್ನಡಿಗ) ಮಂಗಳೂರು: ಮಂಗಳೂರಿನಲ್ಲಿ 20 ವರ್ಷದ ಯುವತಿಯೊಬ್ಬಳು ಸ್ನಾನ ಮಾಡಿ ಬರುವೆ ಎಂದು ಬಾತ್ ರೂಂ ಗೆ ಹೋದವಳು ನಾಪತ್ತೆಯಾದ ಘಟನೆ ನಡೆದಿದೆ.
(ಗಲ್ಪ್ ಕನ್ನಡಿಗ) ಮನೆಯ ಹೊರಗಿನ ಬಾತ್‌ರೂಮ್‌ಗೆ ಸ್ನಾನ ಮಾಡಲೆಂದು ಹೋಗಿದ್ದ ಈಕೆ ನಾಪತ್ತೆಯಾಗಿದ್ದಾಳೆ.
(ಗಲ್ಪ್ ಕನ್ನಡಿಗ) ಈ ಹಿಂದೆಯು ಒಮ್ಮೆ ನಾಪತ್ತೆಯಾಗಿದ್ದ ಈಕೆ ಪ್ರಿಯಕರನೊಂದಿಗೆ ಪತ್ತೆಯಾಗಿದ್ದು ಈ ಬಾರಿ ಪ್ರಿಯಕರನೊಂದಿಗೆ ನಾಪತ್ತೆಯಾಗಿರಬಹುದೆಂದು ಸಂಶಯಿಸಲಾಗಿದೆ.
(ಗಲ್ಪ್ ಕನ್ನಡಿಗ)ಎಡಪದವು ಗ್ರಾಮದ ಶಿಬ್ರಿಕೆರೆಯ ಸಮತಾ (20) ನಾಪತ್ತೆಯಾದ ಯುವತಿ.ಜು.24ರಂದು ಸಂಜೆ ಸ್ನಾನಕ್ಕೆಂದು ತೆರಳಿದಾಕೆ ನಾಪತ್ತೆಯಾಗಿದ್ದಾಳೆ.
(ಗಲ್ಪ್ ಕನ್ನಡಿಗ) ಯುವತಿಯು ಯುವಕನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ತೆರಳಿರುವ ಸಾಧ್ಯತೆ ಇದೆ ಎಂದು ಸಂಶಯ ವ್ಯಕ್ತಪಡಿಸಿ ಮನೆಯವರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
(ಗಲ್ಪ್ ಕನ್ನಡಿಗ) 4.8 ಅಡಿ ಎತ್ತರ, ಗೋದಿ ಮೈ ಬಣ್ಣ, ಸಪೂರ ಶರೀರ, ಕಪ್ಪು ಬಣ್ಣದ ಚೂಡಿದಾರ್ ಧರಿಸಿದ್ದರು. ಕನ್ನಡ, ಇಂಗ್ಲಿಷ್, ತುಳು ಭಾಷೆ ಮಾತನಾಡುವ ಯುವತಿಯ ಬಗ್ಗೆ ಮಾಹಿತಿ ತಿಳಿದವರು ಬಜ್ಪೆ ಪೊಲೀಸ್ ಠಾಣೆ (0824- 2220531) ಸಂಪರ್ಕಿಸುವಂತೆ ಸೂಚಿಸಲಾಗಿದೆ.