ಮತ್ತೆ ಮಾಯಮೃಗದ ಎರಡನೇ ಭಾಗ- ನಾಪತ್ತೆಯಾದ ಶಾಸ್ತ್ರೀಗಳು, ಇಂದು ಕಾಣಿಸಿಕೊಳ್ಳದ CSP
Tuesday, November 1, 2022
ಟಿ ಎನ್ ಸೀತಾರಾಮ್ ಅವರ ಮತ್ತೆ ಮಾಯಮೃಗ ಧಾರವಾಹಿ ಯ ಮೊದಲನೇ ಕಂತು ಮೂಡಿಸಿದ ಆಕರ್ಷಣೆ ಎರಡನೇ ಕಂತು ಮುಂದುವರಿಸಿದೆ. ಎರಡನೇ ಭಾಗದಲ್ಲಿಯೂ ಧಾರಾವಾಹಿ ಯ ಆಕರ್ಷಣೆಯ ಕಲಾವಿದ CSP ( ಟಿ ಎನ್ ಸೀತಾರಾಮ್ ) ಇಂದು ಕಾಣಿಸಿಕೊಂಡಿಲ್ಲ. ಆದರೆ ಶಾಸ್ತ್ರಿಗಳ ನಾಪತ್ತೆ ಇಂದು ಪ್ರಮುಖ ವಿಚಾರವಾಗಿತ್ತು.
ನಿನ್ನೆಯಷ್ಟೆ ಹೆಂಡತಿ ಜೊತೆಗೆ ಮನೆಗೆ ಬಂದಿದ್ದ ಮಗ ದೇವಸ್ಥಾನದಲ್ಲಿ ತಂದೆ ಶಾಸ್ತ್ರಿ ಜೊತೆಗೆ ಮಾತಾಡಿ ತೆರಳಿದ್ದಾನೆ.ಇಂದು ಶಾಸ್ತ್ರಿಗಳ ಮನೆಗೆ ಬಂದ ದೇವಸ್ಥಾನದ ಶ್ರೀಕಂಠ ಮೂರ್ತಿಗಳಿಗೆ ಶಾಸ್ತ್ರಿಗಳು ಸಿಗದೆ ವಾಪಾಸಾಗಿದ್ದಾರೆ. ಮನೆ ಬಿಟ್ಟರೆ ದೇವಸ್ಥಾನ ಕ್ಕೆ ಮಾತ್ರ ಹೋಗುವ ಶಾಸ್ತ್ರಿಗಳು ಹೆಂಡತಿಗೆ ಗೊತ್ತಿಲ್ಲದೆ ಎಲ್ಲಿ ಹೋದರು ಎಂಬುದು ಕುತೂಹಲ ಮೂಡಿಸಿದೆ. ಇನ್ನು ಶಾಲೆಗೆ ಬಂದ ಹೊಸ ಟೀಚರ್ ಮೊದಲ ದಿನವೆ ಹೊಸ ವಾತವರಣ ಸೃಷ್ಟಿಸಿದ್ದಾರೆ.
ಮದುವೆ ವಿಚಾರ ಬಂದಾಗಲೆ ಅತಿಥಿಗಳ ಮುಂದೆ ಎದ್ದು ಹೋದ ಪೂರ್ವಿ ತನಗೆ ಮದುವೆಯಲ್ಲಿ ಆಸಕ್ತಿ ಇಲ್ಲವೆಂಬುದನ್ನು ತಾಯಿಗೆ ಕಠೋರವಾಗಿ ತಿಳಿಸಿದ್ದಾಳೆ.
ವುಮೆನ್ ಕಮಿಟಿ ಚೇರ್ ಮೆನ್ ಆಗಿರುವ ಮಾಳವಿಕ ಮನೆಗೆ ತನ್ನ ಮಾವ ಮುಖ್ಯಮಂತ್ರಿ ಚಂದ್ರು ಬಂದು ವ್ಯಂಗ್ಯದ ಸ್ವಾಗತ ಸಿಕ್ಕಿದೆ. ತನ್ನ ಗಂಡ ಮಾತಿಗೆ ಸಿಗದೆ ಎರಡು ವರ್ಷವಾಯಿತು ಎಂಬುದನ್ನು ತನ್ನ ಮಾವನಿಗೆ ಮಾಳವಿಕ ಹೇಳಿದ್ದಾಳೆ. ಮಾಳವಿಕ ಪುತ್ರಿಯ ವಿದ್ಯಾಭ್ಯಾಸ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂಬುದನ್ನು ತಿಳಿದ ಮುಖ್ಯಮಂತ್ರಿ ಚಂದ್ರು ಅದೇ ವಿಚಾರವನ್ನು ಇಟ್ಟುಕೊಂಡು ಮಾಳವಿಕಳನ್ನು ವ್ಯಂಗ್ಯ ಮಾಡಿದ್ದಾನೆ. ಮುಖ್ಯಮಂತ್ರಿ ಚಂದ್ರುವನ್ನು ಜೈಲಿಗೆ ಕಳುಹಿಸಿದ ವಿಚಾರವನ್ನು ಮತ್ತೆ ಸೊಸೆ ಜೊತೆಗೆ ಪ್ರಸ್ತಾಪಿಸಿ ಮೂರು ವರ್ಷಗಳ ಜೈಲಿಗೆ ಕಳುಹಿಸಿದ, ಅತ್ತೆ ಸಾವಿಗೆ ಕಾರಣವಾದ ಪಾಪಪ್ರಜ್ಞೆ ಕಾಣಿಸುತ್ತಿಲ್ಲವೆ ಎಂದು ಕೆದಕಿದ್ದಾನೆ.
ಎರಡನೇ ಭಾಗ ಕುತೂಹಲ ಮೂಡಿಸಿದ್ದು, ಶಾಸ್ತ್ರಿಗಳು ಎಲ್ಲಿ ಹೋದರು, ಟೀಚರಮ್ಮ ಹೊಸ ಶಾಲೆಯಲ್ಲಿ ಮಾಡುವ ಕರಾಮತ್ತೇನು. ಮುಖ್ಯಮಂತ್ರಿ ಚಂದ್ರು ತನ್ನ ಸೊಸೆ ಮಾಳವಿಕ ಮೇಲೆ ಸೇಡು ತೀರಿಸಿಕೊಳ್ಳಲು ಹೆಣೆಯುವ ತಂತ್ರವೇನು ಎಂಬುದು ಕುತೂಹಲ ಸೃಷ್ಟಿಸಿದೆ. ಮೂರನೇ ಕಂತಿನಲ್ಲಿ CSP ದರ್ಶನವಾಗಲಿದೆಯ ಎಂಬುದನ್ನು ಕಾದು ನೋಡಬೇಕಿದೆ